ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ

ಶ್ರೀನಗರ, ಜನವರಿ 29  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ, ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ  ಪ್ರದೇಶಗಳಾಗಿ (ಯುಟಿ) ವಿಭಜಿಸಿದ ಆಗಸ್ಟ್ 5 ರಿಂದ ಕಾಶ್ಮೀರ ಕಣಿವೆಯಲ್ಲಿ ಎಲ್ಲಾ ಸೆಲ್ಯುಲಾರ್ ಕಂಪನಿಗಳು  ಮತ್ತು ಬ್ರಾಡ್‌ಬ್ಯಾಂಡ್‌ಗಳ ಹೈಸ್ಪೀಡ್ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.170 ದಿನಗಳ ನಂತರ ಜನವರಿ 25 ರಂದು  ಅಧಿಕಾರಿಗಳು 2 ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸಿದರೂ  ಜನರು, ವಿಶೇಷವಾಗಿ ಮಾಧ್ಯಮ ವ್ಯಕ್ತಿಗಳು, ವೃತ್ತಿಪರರು, ವಿದ್ಯಾರ್ಥಿಗಳು ಮತ್ತು  ವ್ಯಾಪಾರಿಗಳು ಇಂಟರ್ ನೆಟ್‌ ಇಲ್ಲದೆ ತೀವ್ರ ತೊಂದರೆ ಅನುಭವಿಸಿದ್ದರು.

ಎಲ್ಲಾ  ಸೆಲ್ಯುಲಾರ್ ಕಂಪನಿಗಳು ಜನವರಿ 25 ರಂದು ಪೂರ್ವ ಪಾವತಿ ಮತ್ತು ಪೋಸ್ಟ್ ಪೇಯ್ಡ್ ಮೊಬೈಲ್  ಫೋನ್‌ನಲ್ಲಿ 2 ಜಿ ಇಂಟರ್‌ನೆಟ್ ಅನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದರೂ,  ವೇಗವು ತುಂಬಾ ಕಡಿಮೆ ಇರುವುದರಿಂದ ತಮ್ಮ ಮೇಲ್‌ಗಳನ್ನು ಸಹ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ."ಸೋಮವಾರ  ಬೆಳಿಗ್ಗೆಯಿಂದ, ಸರ್ಕಾರದ ಸೂಚನೆಗಳನ್ನು ಅನುಸರಿಸಿ, ನಿಮ್ಮ ಪ್ರದೇಶದಲ್ಲಿನ ಇಂಟರ್ನೆಟ್  ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಸಂದೇಶಗಳು ನಮಗೆ ಬಂದಿವೆ" ಎಂದು ಏರ್‌ಟೆಲ್‌ ಗ್ರಾಹಕರು ಆರೋಪಿಸಿದ್ದಾರೆ. 

ಸ್ಥಿರ ದೂರವಾಣಿ  ಇಂಟರ್ನೆಟ್ ಸೇವೆಯಯನ್ನು ಜನವರಿ 25 ರಂದು  ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಅದರಲ್ಲಿಯೂ ಯಾವುದೇ ಪ್ರಗತಿಯಾಗಿಲ್ಲ. ಜನವರಿ 25 ರಿಂದ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ  ಶ್ವೇತ ಪಟ್ಟಿ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಸ್ಥಿರ ಲೈನ್ ಇಂಟರ್ನೆಟ್ ಸೇವೆಯನ್ನು  ಅನುಮತಿಸುವುದಾಗಿ ಸರ್ಕಾರ ಘೋಷಿಸಿತು.ಆಗಸ್ಟ್ 5 ರಿಂದ ಜಮ್ಮು  ಮತ್ತು ಕಾಶ್ಮೀರ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಎಲ್ಲಾ ಸಂವಹನ ಜಾಲಗಳನ್ನು, ಬ್ರಾಡ್‌ಬ್ಯಾಂಡ್ ಮತ್ತು ಹೈಸ್ಪೀಡ್ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರು, ವಿಶೇಷವಾಗಿ ಮಾಧ್ಯಮ ವ್ಯಕ್ತಿಗಳು, ವೈದ್ಯರು, ವಿದ್ಯಾರ್ಥಿಗಳು ಮತ್ತು ಇತರ  ವೃತ್ತಿಪರರು ತೀವ್ರ ತೊಂದರೆ ಅನುಭವಿಸಿದ್ದಾರೆ