ಸರ್ಮೋಚ್ಛ ನ್ಯಾಯಾಲಯದ ನಿರ್ದೇಶನ ರಸ್ತೆ ಸುರಕ್ಷತಾ: ಕೈಗೊಂಡ ಕ್ರಮಗಳ ಮಾಹಿತಿ ನೀಡಿ

ಗದಗ 19: ರಸ್ತೆ ಅಪಘಾತ ತಡೆಯಲು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಕುರಿತು ಸವರ್ೋಚ್ಛ ನ್ಯಾಯಾಲಯದ ನಿದರ್ೇಶನದಂತೆ ಕರ್ನಾಟಕ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ(ಸಿ.ಎ.ಜಿ.) ಕಚೇರಿಯ ರಸ್ತೆ ಸುರಕ್ಷತಾ ಜಾರಿ ವಿಭಾಗ ಸಂಬಂಧಿತ ಇಲಾಖೆಗಳಿಂದ ಮಾಹಿತಿ ಕೇಳಿದ್ದು ಫೆ. 25ರ ಒಳಗಾಗಿ ಕಡ್ಡಾಯವಾಗಿ ನೀಡಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚಿಸಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೊಲೀಸ, ಲೋಕೋಪಯೋಗಿ, ಸಾರ್ವಜನಿಕ ಶಿಕ್ಷಣ, ಪ.ಪೂ. ಶಿಕ್ಷಣ, ಪ್ರಾದೇಶಿಕ ಸಾರಿಗೆ, ಆರೋಗ್ಯ ಇಲಾಖೆಗಳು ಹಾಗೂ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗಳು ತಮಗೆ ಕಳುಹಿಸಲಾದ ನಿಗದಿತ ನಮೂನೆಗಳನ್ನು ಹಾಗೂ ಮಾಹಿತಿಯನ್ನು ಸರಿಯಾಗಿ ತಯಾರಿಸಿ ನೀಡಲು ಜಿಲ್ಲಾಧಿಕಾರಿ ತಿಳಿಸಿದರು.

   ಮಹಾಲೆಕ್ಕಪರಿಶೋಧಕ ಸಿಎಜಿ ಕನರ್ಾಟಕದ ರಸ್ತೆ ಸುರಕ್ಷತಾ ಜಾರಿ ವಿಭಾಗದ ರಾಜೀವ ಮಹಷರ್ಿ ಅವರು ಮಾತನಾಡಿ ದೇಶದ ಸವರ್ೋಚ್ಛ ನ್ಯಾಯಾಲಯವು ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸಿಎಜಿ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಜಾರಿ ನಿದರ್ೇಶನ ವಿಭಾಗದ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2014-15 ರಿಂದ 2018-19ರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಗಳ ರಸ್ತೆಯ ಮೇಲೆ ಆಗಿರುವ ಅಪಘಾತ, ರಸ್ತೆ ಸುರಕ್ಷತೆ ಅನ್ವಯ ವಿವಿಧ ಇಲಾಖೆಗಳು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧಿತ ಇಲಾಖೆಗಳಿಗೆ ನಿಗದಿತ ನಮೂನೆ ಹಾಗೂ ಮಾಹಿತಿಯನ್ನು ಕೇಳಲಾಗಿದೆ. ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿನ ಕೇಳಲಾದ ಅವಧಿಯ ಮಾಹಿತಿ ಕುರಿತಂತೆ ತಮ್ಮ ತಂಡ ಪರಿಶೀಲನೆ ನಡೆಸಿ ರಸ್ತೆ ಸುರಕ್ಷತಾ ಕ್ರಮಕ್ಕೆ ಅನ್ವಯಿಸಿ ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಿದೆ. ಸಾರ್ವಜನಿಕ ಹಾಗೂ ಪ.ಪೂ. ಶಿಕ್ಷಣ ಇಲಾಖೆಗಳು ಮಕ್ಕಳು, ಯುವಜನರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಕೈಗೊಂಡಿರುವ ಕುರಿತು ತಿಳಿಸಲಾಗಿದೆ. ಒಟ್ಟಾರೆಯಾಗಿ ಮುಂಬರುವ ದಿನಗಳಲ್ಲಿ ಅಪಘಾತದ ತಡೆ ಮುನ್ನೆಚ್ಚರಿಕೆ ಜಾಗೃತಿ, ಅಪಘಾತವಾದಾಗ ಪೊಲೀಸ, ಆರೋಗ್ಯ, ಸಾರಿಗೆ ಇಲಾಖೆಗಳ ಸಮನ್ವಯ ಕಾರ್ಯ ಕುರಿತು ಕಾರ್ಯನಿರ್ವಹಣಾ ವ್ಯವಸ್ಥೆ ಇದರಿಂದ ಸಾಧ್ಯವಾಗಲಿದೆ ಎಂದು ರಾಜೀವ ಮಹಷರ್ಿ ತಿಳಿಸಿದರು.

ಗದಗ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎನ್.ಯತೀಶ, ಗದಗ ವಿಭಾಗೀಯ ವಾಯವ್ಯ ಸಾರಿಗೆ  ನಿಯಂತ್ರಣಾಧಿಕಾರಿ ಎಫ್.ಸಿ.ಹಿರೇಮಠ, ಲೋಕೋಪಯೋಗ  ಇಲಾಖೆ ಸಹಾಯಕ ಕಾರ್ಯಕಾರಿ ಅಭಿಯಂತ ರಾಠೋಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗೀಡದ, ಪ.ಪೂ. ಶಿಕ್ಷಣ ಇಲಾಖೆ ಉಪನಿದರ್ೇಶಕ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಗಳಾ ತಾಪಸ್ಕರ, ಪ್ರಾದೇಶಿಕ ರಸ್ತೆ ಸಾರಿಗೆ ಕಚೇರಿಯ ಗಣೇಶ,  ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು