ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ

ಲೋಕದರ್ಶನ ವರದಿ

ರಾಯಬಾಗ 05: ವಿದ್ಯುತ್ ಸಮಸ್ಯೆಗಳ ಬಗ್ಗೆ ಯಾವುದೇ ದೂರುಗಳಿದ್ದರೂ ಸಹಾಯವಾಣಿ ಸಂಖ್ಯೆ 1912 ಗೆ ಉಚಿತವಾಗಿ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು ಎಂದು ರಾಯಬಾಗ ಉಪವಿಭಾಗದ ಹೆಸ್ಕಾಂ ಅಧಿಕಾರಿ ನಾಗರಾಜ ಯಳಕರ ಹೇಳಿದರು. 

ಬುಧವಾರ ತಾಲೂಕಿನ ನಿಪನಾಳ ಗ್ರಾಮದಲ್ಲಿ ಹೆಸ್ಕಾಂ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಹಕರ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನೆಗಳಲ್ಲಿ ಆಯ್ಎಸ್ಆಯ್ ಗುರುತಿನ ಗುಣಮಟ್ಟದ ವಿದ್ಯುತ್ ಸಾಮಗ್ರಿಗಳನ್ನು ಉಪಯೋಗಿಸಬೇಕು. ವಿದ್ಯುತ್ ಉಳಿತಾಯ ಮಾಡಲು ಎಲ್ಇಡಿ ಬಲ್ಬ್ಗಳನ್ನು ಬಳಸಬೇಕೆಂದು ಸಲಹೆ ನೀಡಿದರು. ವಿದ್ಯುತ್ ಬಳಕೆಯಲ್ಲಿ ಸುರಕ್ಷತಾ ಸಲಹೆಗಳು, ಉಳಿತಾಯ ಕ್ರಮಗಳು, ಎಲ್ಇಡಿ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಬಳಕೆ ಕುರಿತು ವಿಸ್ತಾರವಾಗಿ ತಿಳಿಸಿದರು. ನಿಪನಾಳ ಗ್ರಾಮದ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಬಿ.ಸಂಗಟೆಅವರು ಪ್ರೌಢ ಶಾಲೆಯಲ್ಲಿರುವ ಕಂಪ್ಯೂಟರ್ಗಳಿಗೆ ಮತ್ತು ಶುದ್ಧ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಅವಶ್ಯಕವಾಗಿದ್ದು, ಕೂಡಲೇ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. 

ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ ನಡೆಯುವ ಬಗ್ಗೆ ಪ್ರಚಾರದ ಕೊರತೆಯಿಂದ ಬೆರಳಣಿಕೆ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಕಾಟಾಚಾರಕ್ಕೆ ಎನ್ನುವಂತೆ ಸಭೆಜರುಗಿತು. ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಮ್ಯಾಗಡೆ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಗ್ರಾಹಕರ ಜಾಗೃತಿ ಸಭೆಗೆ ಚಾಲನೆ ನೀಡಿದರು. 

ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ರಾಜು ಹಳಬರ, ಪಿಡಿಒಕಾಂತು ಪಾಟೀಲ, ಬಸಪ್ಪಕಂಟಿಕಾರ, ಮಹಾದೇವಿ ಕಂಟಿಕಾರ, ಎಮ್.ಕೆ.ಶೆಗುಣಸಿ, ಎಸ್.ಎಲ್.ಕೋಳಿ, ಮಾಳಪ್ಪಾ ವ್ಯಾಪಾರಿ, ಕೇದಾರಿಜಿಡ್ಡಿಮನಿ, ಸುರೇಂದ್ರ ಪೋತದಾರ, ಮಾಳಪ್ಪಾ ಸನದಿ, ಶ್ರೀಕಾಂತ ಹುಲಿ, ದುಂಡಪ್ಪ ಅಂಬನಗೊಳ ಸೇರಿದಂತೆ ಇತರರು ಉಪಸ್ಥಿತರಿದ್ದರು.