ಸಕಲ ಸರ್ಕಾರಿ ಗೌರವದೊಂದಿಗೆ ವೀರಯೋಧನ ಅಂತ್ಯಕ್ರಿಯೆ

ಗದಗ 29: ದೇಶದ ಭೂಸೇನೆಯ ಮರಾಠಾ ಲೈಟ ಇನಫೆಂಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗದಗ ಜಿಲ್ಲೆ ರೋಣ ತಾಲೂಕಿನ ಕರಮುಡಿ ಗ್ರಾಮದ ಯೋಧ ಸುಭೇದಾರ ವಿರೇಶ ಕುರಹಟ್ಟಿ ಗಡಿ ಭಾಗದ ಚಕಮಕಿಯಲ್ಲಿ ವೀರ ಮರಣ ಹೊಂದಿದ್ದು ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವಗಳೊಂದಿಗೆ ಅವರ ಸ್ವಗ್ರಾಮ ಕರಮುಡಿ ಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಗದಗ ಜಿಲ್ಲೆ ಗಡಿ ಬೇಲೇರಿಯಲ್ಲಿ ರಾಜ್ಯದ ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಗಳ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಭೂಸೇನೆಯ ಪುಷ್ಪಾಲಂಕೃತ ವಾಹನದಲ್ಲಿದ್ದ  ವಿರೇಶ ಕುರಹಟ್ಟಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗೌರವ ಅರ್ಪಿಸಿದರು. ಅಲ್ಲಿಂದ ಕರಮುಡಿಯವರೆಗೆ ದಾರಿಯದ್ದ ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಗ್ರಾಮಸ್ಥರು ಜಯಘೋಷ ಮೊಳಗಿಸಿ ಪುಷ್ಪಮಾಲೆ ಅಪರ್ಿಸಿ ಗೌರವ ಸಲ್ಲಿಸಿದರು. 

ಕರಮುಡಿ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸುತ್ತಲಿನ ಗ್ರಾಮಗಳ ಜನರು ಭಾರತ ಮಾತಾ ಕಿ ಜಯ, ವೀರಯೋಧ ವಿರೇಶ ಅಮರ ರಹೆ ಮುಂತಾದ ದೇಶಪ್ರೇಮದ ಜಯಕಾರ ಘೋಷಣೆಗಳೊಂದಿಗೆ ಅವರ ಪಾಥರ್ಿವ ಶರೀರವನ್ನು ದುಖಭರಿತರಾಗಿಯೇ ಸ್ವಾಗತಿಸಿದರು. ದುಖತಪ್ತ ಯೋಧನ ಮನೆಯಲ್ಲಿ ಕುಟುಂಬದ ಅಂತಿಮ ವಿಧಾನಗಳನ್ನು ಪೂರೈಸಿದ ನಂತರ ಗ್ರಾಮದ ಹಣಮಂತನ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನ ಹಾಗೂ ಗೌರವ ಸಲ್ಲಿಕೆಗಾಗಿ ಸುಭೇದಾರ ವಿರೇಶ ಕುರಹಟ್ಟಿ ಅವರ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿ ಸಮಾಜದ ವಿಧಿ ವಿಧಾನ, ಸಕಲ ಸರ್ಕಾರಿ ಹಾಗೂ ಸೇನಾ ಗೌರವಗಳೊಂದಿಗೆ ಜನರ ಜಯಘೋಷಗಳ ಮಧ್ಯೆ ಅಂತಿಮಸಂಸ್ಕಾರ ನೆರವೇರಿತು.

ಇಂಚಿಗೇರಿಯ ಗುರುಸಿದ್ದೇಶ್ವರ ಸ್ವಾಮಿಜಿ, ಶಿವಾಚಾರ್ಯ ಪಟ್ಟದೇವರು, ಅಸೂಟಿಯ ವೇದಮೂರ್ತಿ  ರೇವಣಸಿದ್ದೇಶ್ವರ ಸ್ವಾಮಿಗಳ ಸನ್ನಿಧಾನದಲ್ಲಿ ಜರುಗಿದ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಸುಭೇದಾರ ವಿರೇಶ ಕುರಹಟ್ಟಿ ಅವರ ಪಾಥರ್ೀವ ಶರೀರಕ್ಕೆ  ಸಕರ್ಾರದ ಪರವಾಗಿ ಅಂತಿಮ ಗೌರವ ಸಲ್ಲಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಮಾಜಿ ಶಾಸಕರಾದ ಜಿ.ಎಸ್.ಪಾಟೀಲ, ಬಿ.ಆರ್.ಯಾವಗಲ್ಲ,  ತಹಶೀಲ್ದಾರ ಜಿ.ಬಿ. ಜಕ್ಕನಗೌಡ್ರ, ಅಸೂಟಿ ಗ್ರಾ.ಪಂ. ಅಧ್ಯಕ್ಷ ದಿಂಡೂರ, ಸೇರಿದಂತೆ ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ಸುಭೇದಾರ ವಿರೇಶ ಕುರಹಟ್ಟಿ ಸೇವೆ ಸಲ್ಲಿಸುತ್ತಿದ್ದ 18ನೇ ಬಟಾಲಿಯನ್ ಮರಾಠಾ ಲೈಟ್ ಇನಫೆಂಟ್ರಿಯ ಬ್ರಿಗೇಡಿಯರ್ ಗೋವಿಂದ ಕಲವಡ ಪಾಥರ್ಿವ ಶರೀರಕ್ಕೆ ಸೇನೆಯ ಪರವಾಗಿ ಅಂತಿಮ ನಮನ ಸಲ್ಲಿಸಿದರು. ರೆಸ್ಟಿಂಗ ಪರೇಡದಲ್ಲಿ ಗೌರವ ಸೂಚಕ ಮೂರುಸುತ್ತು ಗಾಳಿಯಲ್ಲಿ ಗುಂಡುಹಾರಿಸಲಾಯಿತು. ಮರಾಠಾ ಲೈಟ ಇನಫೆಂಟ್ರಿಯ 60 ಯೋಧರ ತಂಡ ಪಾಥರ್ಿವ ಶರೀರದೊಂದಿಗೆ ಕರಮುಡಿಗೆ ಆಗಮಿಸಿ ತನ್ನ ಸ್ನೇಹಿತನ ಸಂತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿತ್ತು