ಹೆರಕಲ್ ಕುಡಿಯುವ ನೀರಿನ ಯೋಜನೆ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ: ರಾಕೇಶ ಸಿಂಗ್

ಬಾಗಲಕೋಟೆ24: ಬಾಗಲಕೋಟೆ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಹೆರಕಲ್ ಯೋಜನೆಯ ಕಾಮಗಾರಿಯನ್ನು ಡಿಸೆಂಬರ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಬಿಟಿಡಿಎ ಸಭಾಭವನದಲ್ಲಿಂದು ಜರುಗಿದ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬರುವ ಬೇಸಿಗೆಯಲ್ಲಿ ನಗರದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕಾಮಗಾರಿಗಳನ್ನು ಡಿಸೆಂಬರ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಶಾಸಕ ವೀರಣ್ಣ ಚರಂತಿಮಠ ಅವರು ತಿಳಿಸಿರುವಂತೆ ಅನಗವಾಡಿ ಹತ್ತಿರ ಸೇತುವೆ ನಿರ್ಮಾಣ  ಬದಲಾಗಿ ಬನ್ನಿದಿನ್ನಿ ಹತ್ತಿರ ಹೆಚ್ಚುವರಿ ಜಾಕವೆಲ್ ನಿಮರ್ಿಸಿ ಈಗಾಗಲೇ ನಿಮರ್ಿಸಿರುವ ರೈಸಿಂಗ್ ಮೇನ್ಗೆ ಜೋಡಿಸುವುದರಿಂದ ಹಣ ಉಳಿತಾಯವಾಗುವದರ ಜೊತೆಗೆ ಕಡಿಮೆ ಅವಧಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ತರಬಹುದಾಗಿದೆ. ಪಯರ್ಾಯ ಕಾಮಗಾರಿ ಅಂದಾಜು ಪತ್ರಿಕೆಯ ತುಲನಾತ್ಮಕ ಪಟ್ಟಿಯೊಂದಿಗೆ ಕೆಬಿಜಿಎನ್ಎಲ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

      ಬಿಟಿಡಿಎದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಹುದ್ದೆಯು 3 ವರ್ಷಗಳಿಂದ ಖಾಲಿ ಇದ್ದು ಭೂಸ್ವಾಧೀನಕ್ಕೆ ಸಂಬಂಧಿಸಿದ ಬಹಳಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವದರಿಂದ ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಅಗತ್ಯವಿದ್ದು, ಭೂಸ್ವಾಧೀನ ಪ್ರಕರಣಗಳನ್ನು ಚುರುಕುಗೊಳಿಸಲು ಈ ಹುದ್ದೆಗೆ ಪೂರ್ಣ ಪ್ರಮಾಣದ ಅಧಿಕಾರಿಗಳ ನಿಯೋಜನೆ ಅಗತ್ಯವಿವೆ. ಅಲ್ಲದೇ ಪುನರ್ವಸತಿ ಅಧಿಕಾರಿ ಹುದ್ದೆಯು ಖಾಲಿ ಇದ್ದು ಎರಡರಲ್ಲಿ ಕನಿಷ್ಟ ಒಂದು ಹುದ್ದೆಯಾದರೂ ಪೂರ್ಣ ಪ್ರಮಾಣದ ಅಧಿಕಾರಿಯನ್ನು ನೇಮಿಸಲು ಶಾಸಕ ವೀರಣ್ಣ ಚರಂತಿಮಠ ಸಭೆಗೆ ತಿಳಿಸಿದಾಗ ಈ ಕುರಿತು ಕ್ರಮಕೈಗೊಳ್ಳಲಾಗುವುದೆಂದು ಪ್ರಧಾನ ಕಾರ್ಯದಶರ್ಿಗಳು ತಿಳಿಸಿದರು.

 ಮುಳುಗಡೆ ವ್ಯಾಪ್ತಿಗಳಲ್ಲಿ ಬರುವ ಸಂಘ ಸಂಸ್ಥೆಗಳಿಗೆ ನಿವೇಶನ ಹಂಚಿಕೆ ಮಾಡಲು ಅಜರ್ಿಗಳು ಸಲ್ಲಿಸುತ್ತಿದ್ದು, ಪ್ರಾಧಿಕಾರದ ಬೋರ್ಡನಲ್ಲಿ ಮಂಡಿಸಲಾಗಿದೆ. ನಿವೇಶನ ಹಂಚಿಕೆಗೆ ತಿಮರ್ಾನಿಸಿದ್ದು, ಹಂಚಿಕೆ ಮಾಡಬಹುದಾದ ನಿವೇಶನ ಅಳತೆಯ ಸ್ಲ್ಯಾಬ್ ನಿಗದಿ ಪಡಿಸಲು ಸಭೆಗೆ ಮಂಡಿಸಲಾಯಿತು. ಇಂತಹ ಪ್ರಕಟಣಗಳಲ್ಲಿ ಈಗಾಗಲೇ 150 ಸಂಘ ಸಂಸ್ಥೆಗಳಿಗೆ ನಿವೇಶನ ನೀಡಲಾಗಿದೆ. ಜಮೀನು ಕಳೆದು ಕೊಂಡವರಿಗೆ ಮತ್ತು ಬಾಡಿಗೆದಾರರಿಗೆ ಹಾಗೂ ಬ್ಯಾಂಕ್ಗಳಿಗೆ ಹಂಚಿಕೆ ಮಾಡಲಾದ ಮಾಹಿತಿಯನ್ನು ಕೊಟ್ಟನಂತರ 62 ಅಜರ್ಿಗಳ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು. ಯುನಿಟ್-3 ಯಲ್ಲಿ ವೈಜ್ಞಾನಿಕವಾಗಿ ದರ ಪರಿಷ್ಕರಣೆ ಮಾಡಲು ಸಭೆಯಲ್ಲಿ ತಿಳಿಸಲಾಯಿತು.

      ನವನಗರದಲ್ಲಿ ಕಸ ವಿಲೇವಾರಿಗೆ ಸೆಕ್ಟರ ವೈಜ್ ಕಾಂಟ್ರ್ಯಾಕ್ಟರ ನೀಡುವ ಮೂಲಕ ಕಸ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಪೂರ್ಣ ಪ್ರಮಾಣದಲ್ಲಿ ನವನಗರವನ್ನು ನಿಭಾಯಿಸಲು ಸಂಪೂರ್ಣವಾಗಿ ಒಬ್ಬರಿಗೆ ನೀಡಿದರೆ ಸೆಕ್ಟರನಲ್ಲಿರುವ ಕೆಲವು ಮನೆಗಳ ಕಸವನ್ನು ಮಾತ್ರ ವಿಲೇವಾರಿ ಮಾಡಿಬಿಡುತ್ತಾರೆ. ಹೀಗಾಗಬಾರದೆಂದರೆ ಸೆಕ್ಟರ್ ವೈಜ್ ಕಂಟ್ರ್ಯಾಕ್ಟರ ಕೊಟ್ಟರೆ ಬಹಳ ಜನರಿಗೆ ಉದ್ಯೋಗ ದೊರೆತಂತಾಗುತ್ತದೆ ಎಂದು ಶಾಸಕ ಚರಂತಿಮಠ ತಿಳಿಸಿದರು. ಈ ಕಾರ್ಯವನ್ನು ಬಿಟಿಡಿಎ ಹಾಗೂ ನಗರಸಭೆಯವರು ಜಂಟಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

        ನಿವೇಶನಗಳನ್ನು ಯಾವ ಉದ್ದೇಶಕ್ಕೆ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಮಂಜೂರಾದ ನಿವೇಶನದಲ್ಲಿ ಮುಳ್ಳು ಕಂಟಿಗಳು ಬೆಳೆದಿದ್ದರೆ ಅವುಗಳನ್ನು ಸ್ವಚ್ಛಗೊಳಿಸುವಂತೆ ಮಾಲಿಕರಿಗೆ ಸೂಚಿಸಬೇಕು. ಇಲ್ಲವಾದಲ್ಲಿ ನಗರಸಭೆಯಿಂದಲೇ ಸ್ವಚ್ಚಗೊಳಿಸಿ ಕಂಪೌಂಡ್ ಹಾಕಿ ಅದರ ಖರ್ಚನ್ನು ಅವರಿಂದ ಪಡೆಯಬೇಕು ಎಂದು ಚರಂತಿಮಠ ಸೂಚಿಸಿದರು. ನವನಗರದ ಮುಖ್ಯ ರಸ್ತೆಗಳ ಬದಿಯಲ್ಲಿ ಅಳವಡಿಸಲಾದ ಬೀದಿ ದೀಪದ ಕಂಬಗಳ ಕೆಳಗೆ ಗಿಡಮರಗಳು ಬೆಳೆದು ಎತ್ತರವಾಗಿದ್ದು, ಅಲ್ಲಿ ಬೆಳಕಿನ ಅಭಾವವಿದ್ದು, ಗಿಡಮರಗಳ ನೆರಳು ಆವರಿಸದಂತೆ ರಸ್ತೆ ಸ್ಪಷ್ಟವಾಗಿ ಕಾಣುವಂತೆ ವಿದ್ಯುತ್ ದೀಪ ಅಳವಡಿಸಬೇಕು ಎಂದರು.

    ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿ.ಪಂ ಸಿಇಓ ಇಕ್ರಂ ಶರೀಪ್, ಉಪವಿಭಾಗಾಧಿಕಾರಿ ಗಂಗಪ್ಪ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಬಿಟಿಡಿಎ ಮುಖ್ಯ ಇಂಜಿನೀಯರ್ ವಾಸನದ, ನಗರಭಿವೃಧ್ದಿ ಕೋಶದ ಯೋಜನಾ ನಿದರ್ೇಶಕ ವಿಜಯ ಮೆಕ್ಕಳಕಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.