ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳು ಜಾತಿ ಬೇಧ ಮರೆತು ಎಲ್ಲರೂ ಸರಿಸಮಾನರೆಂದು ಸಾರಿದರು: ಜಿಲ್ಲಾಧಿಕಾರಿ

 ವಿಜಯಪುರ ಮೇ.10 : ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ಯ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಮಾಡಿ, ಪುಪ್ಷನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

         ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾತನಾಡಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳು ಸಂಸಾರಿಕ ಜೀವನ ಸಾಗಿಸಿಕೊಂಡು ಮಲ್ಲಿಕಾಜರ್ುನನ ಸೇವೆಗೈಯುತ್ತಿದ್ದಳು, ಜಾತಿ ಬೇಧ ಮರೆತು ಎಲ್ಲರೂ ಸರಿಸಮಾನರೆಂದು ಸಾರಿದರು. ಕಿತ್ತೂರು ಚೆನ್ನಮ್ಮ, ಅಕ್ಕಮಹಾದೇವಿಯಂತೆ ವೀರಶರಣೆಯಾಗಿ ಹೊರಹೊಮ್ಮಿದರು. ವೇಮನವರನ್ನು ತತ್ವಜ್ಞಾನಿಯಾಗಿ ಪರಿವತರ್ಿಸಿದ ಕೀತರ್ಿ ಹೇಮರೆಡ್ಡಿ ಮಲ್ಲಮ್ಮನವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷರಾದ ಸುರೇಶ ದೇಸಾಯಿ ಅವರು ಮಾತನಾಡಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾಜರ್ುನನ್ನು ಆರಾಧಿಸಿ, ಧ್ಯಾನಿಸಿ ಸದ್ಗತಿ ಹೊಂದಿದಳಲ್ಲದೆ, ತನ್ನ ಕುಲಕ್ಕೆ ಸಂಪತ್ತಿನಿಂದ ಸೊಕ್ಕಬೇಡಿ, ದಾನ ಗುಣ ಬೆಳೆಸಿಕೊಳ್ಳಬೇಕು ಸಾರಿದ್ದಾರೆ ಎಂದರು. 

          ಈ ಸಂದರ್ಭದಲ್ಲಿ ದೇ.ಹಿಪ್ಪರಗಿ ಶಾಸಕರಾದ ಸೋಮನಗೌಡ ಪಾಟೀಲ, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ತಹಶೀಲ್ದಾರ ಮೋಹನಕುಮಾರಿ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಉಪನಿದರ್ೇಶಕಿ, ಪ.ಪೂ ಶಿಕ್ಷಣ ಇಲಾಖೆ ಉಪ ನಿದರ್ೇಶಕ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ೇಶಕ ಮಹೇಶ ಪೋತ್ದಾರ, ಡಾ.ಕರಿಗೌಡರ, ಡಾ.ಕಂಠೀರವ ಕುಲ್ಲೊಳ್ಳಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.