ಸಹಾಯ ಮಾಡುವುದು ದೇಶ ಸೇವೆ ಮಾಡಿದಂತೆ: ಅಮರೇಶ

ಲೋಕದರ್ಶನ ವರದಿ

ಕೊಪ್ಪಳ 22: ದೇಶ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ಸಹಾಯ ಮಾಡುವುದು ದೇಶ ಸೇವೆ ಮಾಡಿದಂತೆ, ಇಂತಹ ಸಂದಿಗ್ಧತೆಯಲ್ಲಿ ಮಾನವೀತೆ ಬಹು ಮುಖ್ಯವೆಂದು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಮರೇಶ  ಕರಡಿ ಹೇಳಿದರು.

ಭಾಗ್ಯನಗರದಲ್ಲಿ ಬುಧವಾರದಂದು ಬಡವರು, ನಿರ್ಗತಿಕರು, ಅಲೆಮಾರಿಗಳಿಗೆ ಕಿರಾಣಿ ದಿನಸಿ ವಸ್ತುಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಸಹಾಯ ಅಥವಾ ದಾನವನ್ನು ಪ್ರಚಾರಕ್ಕಾಗಿ ಮಾಡದೆ, ತೊಂದರೆಗೆ ಒಳಗಾಗಿರುವ ಜನರಿಗೆ ಬೇಕಾದ ಅಗತ್ಯ ನೆರವು ಹಾಗೂ ಮಾನಸಿಕ ಧೈರ್ಯವನ್ನು ತುಂಬವ ಕೆಲಸ ನಡೆಯಬೇಕು ಎಂದರು.

ಕೋವಿಡ್-19 ವೈರಾಣು ಹರಡದಂತೆ ತಡೆಗಟ್ಟುವಲ್ಲಿ ಸಕರ್ಾರಗಳು ಹೋರಾಡುತ್ತಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಜನತೆ ತೋರಿದ ಸಹಕಾರದಿಂದ ವೈರಸ್ ತಡೆಗಟ್ಟುವಲ್ಲಿ ಸಾಧ್ಯವಾಗುತ್ತಿದೆ, ಕೇವಲ ಸಕರ್ಾರಗಳು ನೆರವು ನೀಡಿದರೆ ಸಾಲದು, ಪ್ರತಿಯೊಬ್ಬರ ಸಹಕಾರ ಬೇಕೆ ಬೇಕು, ಸಕರ್ಾರದೊಂದಿಗೆ ಜನತೆ ಮಾಡುತ್ತಿರುವ ಕೆಲಸವು ದೇಶ ಕಟ್ಟುವದಾಗಿದೆ ಎಂದರು.

ಜಿಲ್ಲಾಡಳಿತವು ಸಕರ್ಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ವೈರಸ್ ತಡೆಗಟ್ಟುವಲ್ಲಿ ಕೈಗೊಂಡಿರುವ ಕಾರ್ಯ ಹಾಗೂ ಲಾಕ್ ಡೌನ್ ನಿಂದ ಉಂಟಾಗಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡಿದ್ದು, ಬಡವರು, ನಿರ್ಗತಿಕರು, ನಿರಾಶ್ರಿತರು, ಕಾಮರ್ಿಕರಿಗೆ ತೊಂದರೆ ಉಂಟಾಗದಂತೆ ಹಲವಾರು ಕ್ರಮಗಳನ್ನು ನಡೆಸಿದೆ, ನಾವು ಕೈಜೋಡಿಸಿ ಸಾಧ್ಯವಿರುವ ಸಹಾಯ, ನೇರವನ್ನು ನೀಡಬೆಕೇಂದು ಹೇಳಿದರು.

ಸಂಸದ ಸಂಗಣ್ಣ ಕರಡಿ ಅವರು ಭಾಗ್ಯನಗರದಲ್ಲಿ ಸುಮಾರು ಒಂದು ಸಾವಿರ ಕಿರಾಣಿ ಕಿಟ್ಗಳನ್ನು ಬಡವರಿಗೆ ವಿತರಣೆ ಮಾಡಿದ್ದು, ಕೊಪ್ಪಳ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಬಡವರಿಗೂ ಕಿರಾಣಿ ದಿನಸಿ ಸಾಮಗ್ರಿ ವಿತರಣೆ ಮಾಡಲಿದ್ದಾರೆ.

ಸಂಸದರು ನೀಡುತ್ತಿರುವ ಕಿರಾಣಿ ಕಿಟ್ಗೆ ತಮ್ಮ ಹೆಸರು ಅಥವಾ ಭಾವ ಚಿತ್ರವಾಗಲಿ ಮತ್ತು ಪಕ್ಷದ ಯಾವುದೇ ಗುರುತುಗಳನ್ನು ಚೀಲಗಳಿಗೆ ಮುದ್ರಿಸಿದೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ಯುವ ಮುಖಂಡ ಗವಿ ಜಂತಕಲ್ ಹೇಳಿದರು. 

ಸಂಸದರು ವೈಯಕ್ತಿಕವಾಗಿ ಜನರಿಗೆ ಅಗತ್ಯ ಸಾಮಗ್ರಿಗಳ ಕಿಟ್ ನ್ನು ಎಲ್ಲ ಬಡವರಿಗೆ ವಿತರಣೆ ಮಾಡುತ್ತಿದ್ದು, ಇವತ್ತು ಭಾಗ್ಯನಗರದಲ್ಲಿನ ಜನರಿಗೆ ಹಂಚಿಕೆ ಮಾಡಿದೆ, ಇನ್ನು ಕಿಟ್ ತಯಾರಿಸುವ ಕೆಲಸ ನಡೆದಿದ್ದು, ಕೊಪ್ಪಳ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ವಿತರಣೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ  ಸುನೀಲ್ಹೆಸರೂರು, ಹಿರಿಯ ಮುಖಂಡರಾದ ಅಂದಪ್ಪ ಅಗಡಿ, ರಾಘವೇಂದ್ರ ಪಾನಘಂಟಿ ವಕೀಲರು, ಯುವ ಮುಖಂಡರಾದ ಗವಿ ಜಂತಕಲ್, ವಿಜಯ ಕುಮಾರ, ಲಕ್ಷ್ಮಣ್ ಚಲ್ಲಮರದ, ಚಂದ್ರಕಾಂತ ನಾಯಕ,ರವಿ ಚಂದ್ರ, ಪುಟ್ಟುರಾಜ ಚಕ್ಕಿ, ಲೋಕೇಶ ಸ್ವಾಮಿ, ದೀಪಕ ಹಿರೇಮಠ, ಹಾತೀಕ್ ಹುಸೇನ, ವಸಂತ ನಾಯಕ, ಇತರರು ಇದ್ದರು.