ಚೆನ್ನೈ, ಜುಲೈ 18 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ.
ಕೇರಳ, ಲಕ್ಷದ್ವೀಪ, ಕರಾವಳಿ ಕರ್ನಾಟಕದ ಬಹುತೇಕ ಪ್ರದೇಶ, ಕರಾವಳಿ ಆಂಧ್ರಪ್ರದೇಶ, ಕರ್ನಾಟಕದ ಒಳನಾಡಿನ ಕೆಲ ಪ್ರದೇಶಗಳು ಹಾಗೂ ತಮಿಳುನಾಡು, ರಾಯಲಸೀಮೆ ಹಾಗೂ ತೆಲಂಗಾಣದ ಹಲವೆಡೆ ವರ್ಷಧಾರೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳದ ಬಹುತೇಕ ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಲಕ್ಷದ್ವೀಪ, ದಕ್ಷಿಣ ಕರ್ನಾಟಕದ ಒಳನಾಡು, ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ಥೇನಿ ಹಾಗೂ ದಿಂಡಿಗುಲ್ ಜಿಲ್ಲೆಗಳು, ಕರಾವಳಿ ಕರ್ನಾಟಕ, ಕರಾವಳಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆ ದಾಖಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳದ ಬಹುತೇಕ ಕಡೆ ಭಾರಿ ಮಳೆಯಾಗಲಿದೆ. ತಮಿಳುನಾಡು, ಲಕ್ಷದ್ವೀಪ, ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು, ತೆಲಂಗಾಣ ಪ್ರದೇಶಗಳಲ್ಲಿ ಕೂಡ ವರ್ಷಧಾರೆಯಾಗಲಿದೆ. ಶನಿವಾರದವರೆಗೆ ಕೇರಳ, ಕರ್ನಾಟಕದಲ್ಲಿ ಬಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.