ಅನೇಕ ಹಳ್ಳಿಗಳಲ್ಲಿ ಭಾರೀ ಮಳೆ, ಮುಖ್ಯ ರಸ್ತೆ ಬಂದ, ಜನರ ಪರದಾಟ

ಅನೇಕ  ಹಳ್ಳಿಗಳಲ್ಲಿ ಭಾರೀ ಮಳೆ, ಮುಖ್ಯ ರಸ್ತೆ ಬಂದ, ಜನರ ಪರದಾಟ Heavy rains in many villages, main road blocked, people protesting

ಬೈಲಹೊಂಗಲ 18: ಸಮೀಪದ ಹೊಸೂರ ಗ್ರಾಮದಲ್ಲಿ ಹಾದು ಹೊಗುವ ಬೈಲಹೊಂಗಲ ಮುನವಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೋಮವಾರ ಸುರಿದ  ಬಾರಿ ಮಳೆಯಿಂದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಈ ಸೇತುವಿಗೆ ಮುತವಾಡ, ಇಂಚಲ, ಮುರಗೋಡ ಹಾಗೂ ನೇಸರಗಿಯಿಂದ ಹಲಕಿ ಕ್ರಾಸ್ ವರೆಗಿನ ರಾಜ್ಯ ಹೆದ್ದಾರಿಯ  ಬಲಭಾಗದ ಎಲ್ಲ ಮಳೆ ನೀರು ಈ ಸೇತುವೆ ಮೂಲಕ ಹಾದು ಮಲಪ್ರಭಾ ನದಿ ಸೇರುತ್ತದೆ. ಸೋಮವಾರ ಸುರಿದ ಬಾರಿ ಮಳೆಯಿಂದ ನಿರ್ಮಾಣ ಹಂತದ ಸೇತುವೆ ಕೊಚ್ಚಿಕೊಂಡು ಹೋಗಿದೆ.   ಹೊಸೂರ ಗ್ರಾಮದ ಹತ್ತಿರವಿರುವ ಯಕ್ಕುಂಡಿ ಸೇತುವೆ ಎಂದು ಕರೆಯುವ ಈ ಕಿರು ಸೇತುವೆ  ಸಂಪೂರ್ಣವಾಗಿ ನೀರಿನಲ್ಲಿ ಮುಳಗಿಹೊಗಿದೆ. ಈ ಭಾಗದ ಜನರು ಮಳೆಗಾಲದಲ್ಲಿ ಸೇತುವೆ ಮುಳುಗಿಹೊಗುವದರಿಂದ, ಸೋಗಲಕ್ಷೇತ್ರ, ಮಾಟೋಳ್ಳಿ, ಮಲ್ಲೂರು, ಸೋಗಲ, ಯಕ್ಕುಂಡಿ, ದುಪದಾಳ, ಕಾರ್ಲಕಟ್ಟಿ, ಬಡ್ಲಿ, ಕಾತ್ರಾಳ, ಗೊಂದಿ, ಅನೇಕ ತಾಂಡಾಗಳು ಹಾಗೂ ಬೈಲಹೊಂಗಲದಿಂದ ಮುನವಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅತಿಯಾದ ತೊಂದರೆಯಾಗುತಿತ್ತು.

ಈ ಬಗ್ಗೆ ಗಮನ ಹರಿಸಿದ  ಬೆಳಗಾವಿ ಸಂಸದರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪ್ರಯತ್ನದಿಂದ ಕೊಟ್ಯಾಂತರ ರೂಪಾಯಿ ಅನುದಾನದಲ್ಲಿ ಸೇತುವೆ ನಿರ್ಮಾಣ ಪ್ರಾರಂಭವಾಗಿತ್ತು. ಕಳೆದ ಹಲವು ತಿಂಗಳಲ್ಲಿ ಕೇವಲ ಸೇತುವೆ ಅಗೆಯುವ ಕೆಲಸದಲ್ಲೆ ನಿರತರಾದ ಗುತ್ತಿಗೆದಾರ ಆಮೆ ಗತಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದರಿಂದ ಇಂದು ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ತಾತ್ಕಾಲಿಕ ಸೇತುವೆ ಮರು ನಿರ್ಮಾಣದ ವರೆಗೆ ಈ ರಸ್ತೆಯ ಪ್ರಯಾಣ ಕಷ್ಟಸಾಧ್ಯವಾಗಿದೆ.  ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಅತ್ಯಂತ ತೊಂದರೆ  ತೆಲೆದೊರಿದ್ದು ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಶೀಘ್ರ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಅನುಭವ ಗುತ್ತಿಗೆದಾರನಿಗೆ ಕಾಮಗಾರಿ ಬದಲಾಯಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.