ಪುದುಚೆರಿ, ನ 30- ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಕಳೆದ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಾಮಾನ್ಯ ಜನ-ಜೀವನ ಅಸ್ತವ್ಯಸ್ತವಾಗಿದೆ.
ವಾಯವ್ಯ ಮುಂಗಾರು ತೀವ್ರಗೊಂಡ ಪರಿಣಾಮ ಪುದುಚೆರಿಯಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಆದರೆ, ರಾತ್ರಿ ವೇಳೆ ಮಾತ್ರ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಬೆಳಗ್ಗೆ ಮಾತ್ರ ಆಗಾಗ್ಗೆ ತುಂತುರು ಮಳೆಯಾಗುತ್ತಿದೆ.
ಪುದುಚೆರಿಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅನೇಕ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ನಿನ್ನೆ ಬೇವಿನ ಮರದ ಕೆಳಗೆ ಕುಳಿತಿದ್ದ ಕನ್ನಗಿ ಸರ್ಕಾರಿ ಪ್ರೌಢಶಾಲೆಯ ಆರು ವಿದ್ಯಾರ್ಥಿನಿಯರು ಮರದ ರೆಂಬೆ ಬಿದ್ದು ಗಾಯಗೊಂಡಿದ್ದಾರೆ. ವಿಲ್ಲನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಲಾಯಿತು.
ಇಂದು ಬೆಳಿಗ್ಗೆ ಓಪ್ಪಳಂನಲ್ಲಿನ ಇಂದಿರಾಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಹತ್ತು ಮೀಟರ್ ಉದ್ದದ ಕಾಂಪೌಂಡ್ ಕುಸಿದಿದೆ. ಮಳೆಯ ನೀರು ಕ್ರೀಡಾ ಮೈದಾನಕ್ಕೂ ನುಗ್ಗಿದೆ.
ಶನಿವಾರವಾದ್ದರಿಂದ ಎಲ್ಲ ಶಾಲೆಗಳಿಗೆ ರಜೆ ಇದೆ. ಆದರೆ, ಕಾಲೇಜುಗಳು ತೆರೆದಿದ್ದು, ತರಗತಿಗಳಿಗೆ ತೆರಳಲು ವಿದ್ಯಾರ್ಥಿಗಳು ತೊಂದರೆ ಎದುರಿಸಿದ್ದಾರೆ. ಭಾರೀ ಮಳೆಯಿಂದ ಪ್ರಮುಖ ಕೆರೆಗಳು ಬಹು ಬೇಗನೆ ತುಂಬುತ್ತಿವೆ