ನವದೆಹಲಿ, ಆಗಸ್ಟ್ 6 ಮಳೆ ಎಲ್ಲ ಕಡೆ ಸದ್ದು, ಸುದ್ದಿ ಮಾಡುತ್ತಿದೆ, ಮಂಗಳವಾರ ಭಾರೀ ಮಳೆ, ಗಾಳಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ಅಪ್ಪಳಿಸಿದೆ.
ಬೆಳಿಗ್ಗೆ 8. 30 ವರೆಗೆ 12.6 ಮಿ.ಮೀಟರ್ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತಾಪಮಾನವು ಈ ಹಂಗಾಮಿನಲ್ಲಿ 26.7 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ. ಹವಾಮಾನ ಇಲಾಖೆಯ ಪ್ರಕಾರ, ಹಗಲಿನಲ್ಲಿ ಭಾರೀ ಮಳೆಯಾಗುವ ಸಮಯದಲ್ಲಿ ಆಕಾಶದಲ್ಲಿ ಹೆಪ್ಪುಗಟ್ಟಿದ ಮೋಡಗಳು ಸಾಮಾನ್ಯವಾಗಿರುತ್ತವೆ .
ಗರಿಷ್ಠ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ತಲುಪಲಿದೆ. ನಿನ್ನೆಯ ಗರಿಷ್ಠ ತಾಪಮಾನವು 37.4 ಡಿಗ್ರಿ ಸೆಲ್ಸಿಯಸ್ ಗೆ ಮುಟ್ಟಿತ್ತು.