ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಭಾರೀ ಮಳೆ, ಪ್ರವಾಹ: ಎನ್ಡಿಎಂಎ

 

ನವದೆಹಲಿ 20: ದೇಶದ ವಿವಿಧೆಡೆ ಮುಂದಿನ 10 ವರ್ಷಗಳಲ್ಲಿ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಂಥ ದುರಂತಗಳಿಂದ 16,000ಕ್ಕೂ ಹೆಚ್ಚು ಮಂದಿ ಬಲಿಯಾಗಲಿದ್ದು, ಸುಮಾರು 47,000 ಕೋಟಿ ರೂ.ಗಳ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ಡಿಎಂಎ) ಮುನ್ಸೂಚನೆ ನೀಡಿದೆ. 

ದೇಶದ 640 ಜಿಲ್ಲೆಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಕೈಗೊಂಡ ವಿಪತ್ತು ಗಂಡಾಂತರ ಅಂದಾಜು ಮೌಲ್ಯಾಂಕನದಿಂದ ಈ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. 

ಭಾರತವು ಅತ್ಯಾಧುನಿಕ ಉಪಗ್ರಹಗಳು ಹಾಗೂ ನೈಸಗರ್ಿಕ ವಿಕೋಪಗಳ ಬಗ್ಗೆ ಮುನ್ಸೂಚನೆ ನೀಡುವ ವ್ಯವಸ್ಥೆಗಳನ್ನು ಹೊಂದಿದ್ದರೂ, ದೇಶದ ವಿವಿಧೆಡೆ ಸಂಭವಿಸುತ್ತಿರುವ ವಿನಾಶಕಾರಿ ಮಳೆ ಆರ್ಭಟ ಮತ್ತು ಜಲಪ್ರಳಯಗಳು ಸಕರ್ಾರಕ್ಕೆ ದೊಡ್ಡ ಸವಾಲಾಗಿ ಪರಿಗಣಿಸಿವೆ  ಎಂದು ಎನ್ಡಿಎಂಎ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. 

ಕೇಂದ್ರ ಸಕರ್ಾರದ ವಿಪತ್ತು ಗಂಡಾಂತರ ತಗ್ಗಿಸುವಿಕೆ (ಡಿಆರ್ಆರ್) ಹಾಗೂ ದುರಂತ ನಿರ್ವಹಣೆಗಾಗಿ ಸಾಮಥ್ರ್ಯ ನಿಮರ್ಾಣ ಕಾರ್ಯವು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಪ್ರಕೃತಿ ವಿಪ್ಲವಗಳ ಬಗ್ಗೆ ಉಪಗ್ರಹಗಳು ಹಾಗೂ ಮುನ್ಸೂಚನೆ ವ್ಯವಸ್ಥೆಗಳು ಮುನ್ನವೇ ಎಚ್ಚರಿಕೆ ನೀಡಿದ್ದರೂ, ಸೂಕ್ತ ಮುಂಜಾಗ್ರತೆ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಸಕರ್ಾರ ವಿಫಲವಾಗುತ್ತಿರುವುದಕ್ಕೆ ಇದೇ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಸಂಭವನೀಯ ವಿಪತ್ತುಗಳು, ಅದರ ಪ್ರತಿಕೂಲ ಪರಿಣಾಮಗಳು ದುರಂತದ ಸಂಕೀರ್ಣತೆಗಳು ಹಾಗೂ ಸಮರ್ಪಕ ರಕ್ಷಣಾ ಕಾಯರ್ಾಚರಣೆ ವಿಧಾನಗಳ ಬಗ್ಗೆ ಬಹುತೇಕ ರಾಜ್ಯಗಳು ಸಮಗ್ರ ಅಧ್ಯಯನಗಳನ್ನು ನಡೆಸದೆ ಪರಿಸ್ಥಿತಿ ನಿಭಾಯಿಸಲು ಸನ್ನದ್ದವಾಗದೆ ಇರುವುದು ಕೂಡ ಇಂಥ ಸನ್ನಿವೇಶಗಳಲ್ಲಿ ಸಾವು-ನೋವು ಹಾಗೂ ಆಸ್ತಿ-ಪಾಸ್ತಿ ನಷ್ಟ ಉಂಟಾಗಲು ಕಾರಣ ಎಂಬ ಅಂಶವನ್ನು ಸಹ ಉಲ್ಲೇಖಿಸಲಾಗಿದೆ.