ಲೋಕದರ್ಶನವರದಿ
ರಾಣೇಬೆನ್ನೂರು: ತಾಲೂಕು ಸೇರಿದಂತೆ ನಗರದಲ್ಲಿ ಕಳೆದ ಅಗಸ್ಟ್ ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ಬಡಾವಣೆಗಳಲ್ಲಿ ನೀರು ತುಂಬಿ ಹರಿದ ಪರಿಣಾಮ ತೆಗ್ಗು-ದಿನ್ನೆಗಳು ಬಿದ್ದು, ಸಂಚಾರ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ಪರಿಣಾಮ ವಾಹನ ಸವಾರರು ಸರಳವಾಗಿ ಮನೆ ಕಾಣದೇ, ಬೀಳುವಂತಹ ಪರಿಸ್ಥಿತಿ ನಿತ್ಯವೂ ಸಾರ್ವಜನಿಕರು ಎದುರಿಸುವಂತಾಗಿದೆ.
ನಗರಸಭೆ ಇತ್ತ ಕಡೆ ಗಮನ ಹರಿಸಿ ಅಸ್ತವ್ಯಸ್ಥಗೊಂಡಿರುವ ರಸ್ತೆಗಳು, ಕಾಲುವೆಗಳು ಮತ್ತು ಬಡಾವಣೆಗಳಲ್ಲಿನ ಸಂಪರ್ಕ ರಸ್ತೆಗಳನ್ನು ಕೂಡಲೇ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.