ಲಖನೌ, ಜೂನ್ 26, ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದಲ್ಲಿ ಕಳೆದ ರಾತ್ರಿ ಮಿಂಚು ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಕನಿಷ್ಠ 32 ಜನರು ಪ್ರಾಣ ಕಳೆದುಕೊಂಡರೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಸಾವುಗಳಲ್ಲಿ 14 ಗೋರಖ್‌ಪುರ-ಬಸ್ತಿ ವಿಭಾಗದಿಂದ ವರದಿಯಾಗಿದ್ದು, ಡಿಯೋರಿಯಾ ಜಿಲ್ಲೆಯು ಅತಿ ಒಂಬತ್ತು ಸಾವುಗಳಿಗೆ ಸಾಕ್ಷಿಯಾಗಿದೆ.ತೋಟ, ಹೊಲ, ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಮಿಂಚಿನ ಹೊಡೆತಕ್ಕೆ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಹಾಗೂ ಎಲ್ಲ ಬಗೆಯ ನೆರವು ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಬಂಧಪಟ್ಟ ಜಿಲ್ಲೆಗಳಿಗೆ ನಿರ್ದೇಶನ ನೀಡಿದ್ದಾರೆ.ಡಿಯೋರಿಯಾ ಜಿಲ್ಲೆಯಲ್ಲಿ 9 ಸಾವುಗಳು, ಪ್ರಯಾಗರಾಜ್‌ನಲ್ಲಿ 6, ಬರಾಬಂಕಿ ಮತ್ತು ಅಂಬೇಡ್ಕರ್‌ನಗರದಲ್ಲಿ ತಲಾ 3 ಸಾವುಗಳು ಸಂಭವಿಸಿವೆ, ಸಿದ್ಧಾರ್ಥನಗರದಿಂದ 2 ಮತ್ತು ಮಹಾರಾಜ್‌ಗಂಜ್, ಕುಶಿಂಗರ್, ಸಂತ ಕಬೀರ್ ನಗರ, ರೇ ಬರೇಲಿ, ಉನ್ನಾವೊ, ಫತೇಪುರ್, ಜೌನ್‌ಪುರ, ಸೋನೆಭದ್ರಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.