ಲೋಕದರ್ಶನ ವರದಿ
ರಾಣೇಬೆನ್ನೂರು.23: ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬಹುತೇಕ ಭಾಗಗಳಲ್ಲಿ ಗುರುವಾರ ಗುಡುಗು-ಶಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಸುಮಾರು ಮುಕ್ಕಾಲು ಗಂಟೆಗಳ ಕಾಲ ರಭಸದ ಮಳೆಯಾಗಿದೆ. ಇದರಿಂದ ನಗರದ ಚರಂಡಿ, ಗಟಾರ, ಮತ್ತಿತರ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಹರಿಯಿತು. ತಾಲೂಕಿನ ಗಂಗಾಪುರದಲ್ಲಿ ಶಿಡಿಲಿಗೆ ಒಂದು ಎತ್ತು ಸಾವನ್ನಪ್ಪಿದೆ. ಇದನ್ನು ಹೊರತು ಪಡಿಸಿದರೆ ಎಲ್ಲಿಯೂ ಸಹ ಪ್ರಾಣ ಹಾಗೂ ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. ಭಾರಿ ಪ್ರಮಾಣದ ಗುಡುಗು ಸಿಡಿಲಿನಿಂದ ನಾಗರೀಕರು ಭಯ ಪಡುವಂತಾಯಿತು.
ಈ ಮಧ್ಯ ಕೆಲಹೊತ್ತು ವಿದ್ಯುತ್ ಸ್ಥಗಿತಗೊಂಡು ಜನರು ಪರದಾಡುವಂತಾಯಿತು. ವರ್ಷದ ಮೊದಲ ವರ್ಷಧಾರೆ ಇದಾಗಿದ್ದು, ಜನರು ಮಳೆಯಿಂದಾಗಿ ಸಂತಸಪಟ್ಟರು.