ಭಾರೀ ಮಳೆ, ಪ್ರವಾಹ ಎಫೆಕ್ಟ್; 5 ರಾಜ್ಯಗಳಲ್ಲಿ ಒಟ್ಟು 465 ಸಾವು


ನವದೆಹಲಿ 28: ಮುಂಗಾರು ಮಳೆಯ ಅಬ್ಬರ ಹಾಗೂ ಪ್ರವಾಹಕ್ಕೆ ಈವರೆಗೆ ಒಟ್ಟು ಐದು ರಾಜ್ಯಗಳ್ಲಿ 465 ಜನರು ಪ್ರಾಣಕಳೆದುಕೊಂಡಿರುವುದಾಗಿ ಎನ್ ಇಆರ್ ಸಿ ತಿಳಿಸಿದೆ. 

ಗೃಹ ಸಚಿವಾಲಯದ ರಾಷ್ಟ್ರೀಯ ತುತರ್ು ನೆರವು ಕೇಂದ್ರ(ಎನ್ ಇಆರ್ ಸಿ)ನೀಡಿರುವ ಮಾಹಿತಿ ಪ್ರಕಾರ, ಮಳೆ ಮತ್ತು ಪ್ರವಾಹಕ್ಕೆ ಮಹಾರಾಷ್ಟ್ರದಲ್ಲಿ 138 ಮಂದಿ, ಕೇರಳದಲ್ಲಿ 125, ಪಶ್ಚಿಮ ಬಂಗಾಳದಲ್ಲಿ 116, ಗುಜರಾತ್ ನಲ್ಲಿ 52 ಹಾಗೂ ಅಸ್ಸಾಂನಲ್ಲಿ 34 ಜನರು ಸಾವನ್ನಪ್ಪಿದ್ದಾರೆ. 

ಮಹಾರಾಷ್ಟ್ರದ 26 ಜಿಲ್ಲೆಗಳು ವರುಣನ ಅಬ್ಬರಕ್ಕೆ ನಲುಗಿ ಹೋಗಿದ್ದರೆ, ಪಶ್ಚಿಮ ಬಂಗಾಲದ 22, ಅಸ್ಸಾಂನ 21, ಕೇರಳದ 10 ಹಾಗೂ ಗುಜರಾತ್ ನ 10 ಜಿಲ್ಲೆಗಳು ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿದ್ದವು. ಅಸ್ಸಾಂನಲ್ಲಿ ಭಾರೀ ಪ್ರವಾಹದಿಂದಾಗಿ ಸುಮಾರು 2.17 ಲಕ್ಷ ಮಂದಿ ತಾತ್ಕಾಲಿಕ ಶಿಬಿರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.