ಸೂರತ್, ಜ 21 : ಸೂರತ್ ನಗರದ ಕಡೋದರ ಪ್ರದೇಶದಲ್ಲಿ 14 ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಮಂಗಳವಾರ ಮುಂಜಾನೆ ಭಾರಿ ಬೆಂಕಿ ಅನಾಹುತ ಸಂಭವಿಸಿ, ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿಗೆ ನಷ್ಟವಾಗಿದೆ.
ಪುನಾ-ಕುಂಭಾರಿಯಾ ರಸ್ತೆಯ ರಘುವೀರ್ ಸೆಲಿಯಮ್ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿದೆ. ಎಂದು ವಿಭಾಗೀಯ ಅಗ್ನಿಶಾಮಕ ಅಧಿಕಾರಿ ಅಶೋಕ್ ಆರ್ ಸಲುಂಕೆ ಹೇಳಿದ್ದಾರೆ.
ಬೆಂಕಿ ನಿಯಂತ್ರಿಸಲು 50 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಜ್ವಾಲೆಯು ಬಹುತೇಕ ಇಡೀ ಕಟ್ಟಡ ಆವರಿಸಿದೆ ತಡರಾತ್ರಿಯವರೆಗೆ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ ಆದರೆ ಸುದೈವ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಬೆಂಕಿ ನಂದಿಸುವ ಕಾರ್ಯಾಚರಣೆಗಳು ನಡೆಯುತ್ತಿವೆ .ಒಟ್ಟಾರೆ ನಷ್ಟ ಕೋಟ್ಯಾಂತರ ರೂಪಾಯಿಯಾಗಲಿದೆ.
ವಿಶೇಷವೆಂದರೆ, ಕಳೆದ ಜನವರಿ 8 ರಂದು ಇದೇ ಕಟ್ಟಡದಲ್ಲಿ ಬೆಂಕಿ ಕೂಡ ಸಂಭವಿಸಿದ್ದು ಆದರೆ ಹೆಚ್ಚಿನ ಹಾನಿಯಾಗದಂತೆ ಶೀಘ್ರದಲ್ಲೇ ನಿಯಂತ್ರಿಸಲಾಗಿತ್ತು .
ಬೆಂಕಿಯ ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ ಇದು ಶಾರ್ಟ್ ಸರ್ಕ್ಯೂಟ್ನಿಂದ ಆಗಿರಬಹುದು ಎನ್ನಲಾಗಿದೆ.