ಯೋಗದಿಂದ ಆರೋಗ್ಯ ಶುದ್ಧಿ; ಬಿಇಓ ಜೋಡಗೇರಿ

ವಿಶ್ವ ಯೋಗ ದಿನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿರುವ ವಿದ್ಯಾಥರ್ಿಗಳ ಚಿತ್ರ.

 ಮೋಳೆ 02: ಮನಸ್ಸನ್ನು ಅರಳಿಸಿ ಭಾವ ಮತ್ತು ಆತ್ಮ ಶುದ್ಧಿಯೊಂದಿಗೆ ಆರೋಗ್ಯ ಶುದ್ಧಿ ನೀಡುವ ಯೋಗಾಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕೆಂದು ಕಾಗವಾಡ ಕ್ಷೇತ್ರಶಿಕ್ಷಣಾಧಿಕಾರಿ ಎ.ಎಸ್. ಜೋಡಗೇರಿ ಸಲಹೆ ನೀಡಿದರು.

 ಅವರು ಇಂದು ಜುಗೂಳ ಗ್ರಾಮದಲ್ಲಿ ಕನರ್ಾಟಕ ಶಿಕ್ಷಣ ಸಮೀತಿ ವತಿಯಿಂದ ವಿಶ್ವ ಯೋಗ ದಿನದ ನಿಮಿತ್ಯ 10 ದಿನಗಳವರೆಗೆ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಗ ಗುರು ಮೋಹನ ಜಾಧವ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಮಾನಸಿಕ, ದೈಹಿಕ, ಬೌದ್ಧಿಕ, ಮತ್ತು ವ್ಯಕ್ತಿತ್ವ ವಿಕಸನಕ್ಕೆ ಯೋಗ ಎಲ್ಲ ರೀತಿಯಲ್ಲಿ ಪುಷ್ಟಿ ನೀಡುತ್ತದೆ. ಈ ರೀತಿಯ ಯೋಗ ಶಿಬಿರಗಳು ಎಲ್ಲೆಡೆಯೂ ನಡೆಯುವಂತಾಗಬೇಕು.ಯೋಗ ಶಿಬಿರ ನಿರಂತರವಾಗಿ ನಡೆದು ಬರಲು ಈ ಯೋಗಪಾಠ ಶಾಲೆಗೆ ಮುಂದಿನ ದಿನಮಾನಗಳಲ್ಲಿ ಗ್ರಾಮಸ್ಥರು ಸುಸಜ್ಜಿತ ಸ್ಥಳಾವಕಾಶ ಕಲ್ಪಿಸಬೇಕೆಂದರು.

  ಮುಖ್ಯ ಅತಿಥಿಯಾಗಿ ದೂದಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಅಣ್ಣಾಸಾಬ ಪಾಟೀಲ ಮಾತನಾಡಿ ನಿರಂತರ ಯೋಗದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುವುದರ ಜೊತೆಗೆ ದೇಹದಲ್ಲಿ ಉಲ್ಬಣಿಸುವ ಕಾಯಿಲೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ ಎಂದ ಅವರು ಯೋಗ ಅಬ್ಯಾಸ ಮಾಡುವುದರಿಂದ ಹಲವು ಲಾಭಗಳಿವೆ. ಮನಸ್ಸು ನಮ್ಮ ಹತೋಟೆಗೆ ಬರುತ್ತದೆ. ನಾವು ಇಚ್ಚಿಸುವ ಉತ್ತಮ ಕಾರ್ಯಗಳು ಫಲಿಸುತ್ತವೆ. ಹಿಂದೆ ಖುಷಿ ಮುನಿಗಳು ಯೋಗ ಹಾಗೂ ತಪಸ್ಸಿನ ಶಕ್ತಿಯನ್ನು ಪಡೆದು ಹೆಚ್ಚುಕಾಲ ಆರೋಗ್ಯವಂತರಾಗಿ ಬದುಕುತ್ತಿದ್ದರು. ದೇಹವನ್ನು ದಂಡಿಸುವ ಮೂಲಕ ಆರೋಗ್ಯವನ್ನ ಪಡೆಯುತ್ತಿದ್ದರೆಂದರು. 


 ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಯೋಗಾಭ್ಯಾಸ ಮಾಡುವುದರಿಂದ ದೈನಂದಿನ ಚಟುವಟಿಕೆಗಳಿಗೆ ಉಲ್ಲಾಸ ಸಿಗುತ್ತದೆ. ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ನುಡಿದರು.

  ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಪಾಟೀಲ, ತಾತ್ಯಾಸಾಬ ಪಾಟೀಲ, ಮುಖ್ಯೋಪಾದ್ಯಾಯರಾದ ವಿ.ವಿ.ಲಿಂಬಾವಳಿ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು, ಸಹಶಿಕ್ಷರು, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.