ಬಸವರಾಜ ಹಿಟ್ನಾಳರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಲೋಕದರ್ಶನ ವರದಿ

ಕೊಪ್ಪಳ 10: ಇಲ್ಲಿನ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರಾಗಿರುವ ಕೆ.ಬಸವರಾಜ ಹಿಟ್ನಾಳ (ಬಸೆಟೆಪ್ಪ) ರವರು ಶನಿವಾರ ಬೆಂಗಳೂರಿನಿಂದ ಕೊಪ್ಪಳಕ್ಕೆ ಆಗಮಿಸುವ ಸಂದರ್ಭದಲ್ಲಿ ಕೂಡ್ಲಗಿ ಹತ್ತಿರದ ಕರಡಿ ರಸ್ತೆ ಮಧ್ಯೆ ಅಡ್ಡ ಬಂದಿರುವ ಪರಿಣಾಮ ಕಾರು ಪಲ್ಟಿಯಾಗಿ ಗಾಯಗೊಂಡ ಘಟನೆ ನಡೆ ಬಳಿಕ ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತಿದ್ದಾರೆ, ಸದರಿ ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. 

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಜಮೀರ್ ಆಹ್ಮದ್ ಖಾನ್, ಉಮಾಶ್ರೀ ಸೇರಿದಂತೆ ಅನೇಕರು ವಿಕ್ರಮ ಆಸ್ಪತ್ರೆಗೆ ತೆರಳಿ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳರ ಆರೋಗ್ಯ ವಿಚಾರಿಸಿದರು. ಬೇಗೆ ಗುಣ ಮುಖರಾಗಿ ವಾಪಸ ಸ್ವಸ್ಥಳಕ್ಕೆ ಆಗಮಿಸಲಿ ಎಂದು ಪ್ರಾರ್ಥಿಸಿದ್ದಾರೆ. ಅದರಂತೆ ಕೊಪ್ಪಳದಲ್ಲಿಯೂ ಸಹ ಅವರು ಅಭಿಮಾನಿಗಳ ಬಳಗ ವಿವಿಧ ದೇವಾಸ್ಥಾನ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.