ಲೋಕದರ್ಶನ ವರದಿ
ಶೇಡಬಾಳ: ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದ್ದು, ವಿದ್ಯಾಥರ್ಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳುವಂತೆ ಕಾಗವಾಡ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಕರೆ ನೀಡಿದರು.
ಅವರು ಗುರುವಾರ ದಿ. 24 ರಂದು ಕಾಗವಾಡ ತಾಲೂಕಿನ ಶೇಡಬಾಳ ಸನ್ಮತಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿದರ್ೇಶಕರ ಕಾಯರ್ಾಲಯ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಕಾಗವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 2019-20 ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಕನರ್ಾಟಕ ಶಿಕ್ಷಣ ಇಲಾಖೆಯು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಲೆಯ, ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೇಡಬಾಳ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ವಿವೇಕ ಬನ್ನೆ, ಚಿಕ್ಕೋಡಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಪಾಟೀಲ ಮೊದಲಾದ ಗಣ್ಯರು ಸಭೆಯನ್ನದ್ದೇಶಿಸಿ ಮಾತನಾಡಿದರು.
ಕ್ರೀಡಾಪಟುಗಳು ತೆಗೆದುಕೊಂಡ ಬಂದ ಕ್ರೀಡಾ ಜ್ಯೋತಿಯನ್ನು ಮುಖ್ಯ ಅತಿಥಿಗಳು ಸ್ವೀಕರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಮಯದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ, ಕ್ರೀಡಾ ಮೈದಾನ ಉದ್ಘಾಟನೆ, ಭಾವಚಿತ್ರ ಪೂಜೆ ಮೊದಲಾದ ಕಾರ್ಯಕ್ರಮಗಳು ಜರುಗಿದವು.
ಈ ಪಂದ್ಯಾವಳಿಯಲ್ಲಿ 9 ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು.
ಈ ಸಮಯದಲ್ಲಿ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ, ಚಿಕ್ಕೋಡಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸಿ.ಎಂ.ಸಾಂಗಲೆ, ಕಾಗವಾಡ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಎಚ್.ಖಡಾಕಡಿ, ಶಿಕ್ಷಣ ಸಂಯೋಜಕರಾದ ಎಸ್.ಬಿ.ಪಾಟೀಲ, ಪಪಂ ಮುಖ್ಯಾಧಿಕಾರಿ ವಿವೇಕ ಬನ್ನೆ, ಪಪಂ ಸದಸ್ಯರಾದ ವೃಷಭ ಚೌಗಲಾ, ಪ್ರಕಾಶ ಮಾಳಿ, ಶ್ರೀನಿವಾಸ ಕಾಂಬಳೆ, ಅನಿಲ ಸರಡೆ, ಶಾಂತಿನಾಥ ಉಪಾಧ್ಯೆ, ರವಿ ಕಾಂಬಳೆ, ಸನ್ಮತಿ ವಿದ್ಯಾಲಯದ ಮುಖ್ಯಾಧ್ಯಾಪಕಿ ಎಂ.ಎನ್.ಕಾಳೆನಟ್ಟಿ, ಜಿ.ಪಾಟೀಲ, ಸಿ.ಎಂ. ಚೌಗಲೆ, ಕೆ.ವ್ಹಿ.ಕಾಂಬಳೆ, ಎಸ್.ಬಿ.ಚೌಗಲಾ, ಸಿ.ಎಂ.ಸಂತೋಷ, ಎಲ್.ವಾಯ್.ಚೌಗಲಾ, ಎ.ಪಿ.ಖಾತೆದಾರ, ಕನರ್ಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ಸದಸ್ಯರು, ರಾಜ್ಯ ಸಕರ್ಾರಿ ನೌಕರರ ಸಂಘ, ಎಸ್.ಸಿ.,ಎಸ್.ಟಿ. ಶಿಕ್ಷಕರ ಸಂಘದ ಅಧ್ಯಕ್ಷರು, ಸದಸ್ಯರು ಸೇರಿದಂತೆ ಶಾಲಾ ಮುಖ್ಯಾಧ್ಯಾಪಕರು ಶಿಕ್ಷಕವೃಂದ, ಸಿಬ್ಬಂದಿ ವರ್ಗ ಇದ್ದರು.
ಸಿ.ಎಂ.ಸಾಂಗಲೆ ಸ್ವಾಗತಿಸಿದರು. ಎಂ.ಕೆ.ಕಾಂಬಳೆ ವಂದಿಸಿದರು. ಎ.ಕೆ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು.