ಮನುಷ್ಯ ಆಸ್ತಿಗಿಂತ ಆರೋಗ್ಯ ಭಾಗ್ಯ ಪಡೆಯುವುದು ಅವಶ್ಯHealth is more important than human property
Lokadrshan Daily
12/21/24, 11:33 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಶಿಗ್ಗಾವಿ 08: ಮನುಷ್ಯ ಆಸ್ತಿ, ಅಂತಸ್ತಿಗಿಂತ ಆರೋಗ್ಯ ಭಾಗ್ಯ ಪಡೆಯುವುದು ಅವಶ್ಯವಾಗಿದೆ. ಆನಾರೋಗ್ಯದಿಂದ ಮನುಷ್ಯನ ಜೀವನ ನಶ್ವರವಾಗಲಿದೆ ಎಂದು ಬಂಕಾಪುರ ಪುಟ್ಟರಾಜ ಗವಾಯಿ ಸಚೇತನ ವಿವಿದ್ದೋದ್ದೇಶ ಸಹಕಾರಿ ಸಂಘದ ಮ್ಯಾನೇಜರ್ ಹನುಮಂತಪ್ಪ ಯು ವಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಪುಟ್ಟರಾಜ ಗವಾಯಿ ಸಚೇತನ ವಿವಿದ್ದೋದ್ದೇಶ ಸಹಕಾರಿ ಸಂಘದ ಆಶ್ರಯದಲ್ಲಿ ಹೋತನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನು ಸ್ವಚ್ಛ ಗೋಳಿಸುವಮೂಲಕ ವಿದ್ಯಾಥರ್ಿಗಳಿಗೆ ಅರಿವು ಮೂಡಿಸಿ ಮಾತನಾಡಿದ ಅವರು, ವಿದ್ಯಾಥರ್ಿಗಳು ಶುದ್ಧವಾದ ವಾಯುವನ್ನು ಸೇವಿಸಬೇಕಾದರೆ ನಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಶುಭ್ರವಾಗಿರಿಸಕೋಳ್ಳಬೇಕು. ಪರಿಸರ ಸ್ವಚ್ಛತೆಯಿಂದ ನಮ್ಮ ಆರೋಗ್ಯಕೂಡಾ ವೃದ್ಧಿಯಾಗಲಿದೆ ಎಂದು ಹೇಳಿದರು.
ಪ್ರತಿ ವಿದ್ಯಾಥರ್ಿಗಳು ಒಂದೋಂದು ಸಸಿ ನೆಟ್ಟು ಪೋಸಿಸಬೇಕು. ವಾತಾವರಣದ ಸಮತೋಲನವನ್ನು ಕಾಯ್ದುಕೋಳ್ಳಬೇಕಾದರೆ ಜನಸಂಖ್ಯೆಗೆ ಅನುಗುಣವಾಗಿ ಊರಿಗೋಂದು ವನ ನಿಮರ್ಾಣದ ಅವಸ್ಯಕತೆಯಿದೆ. ಹಣದ ವ್ಯಾಮೋಹಕ್ಕೆ ಒಳಗಾದ ಮನುಷ್ಯನ ದುರಾಸೆಗೆ ಹೋಲಗಳು ಪ್ಲಾಟ್ ಗಳಾಗಿ ಪರಿವರ್ತನೆ ಯಾಗುತ್ತಿವೆ ಇದು ಮನುಷ್ಯನ ಅವನತಿಗೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ವಿದ್ಯಾಥರ್ಿಗಳು ಕಾಡನ್ನು ಉಳಿಸಿ ಪರಿಸರವನ್ನು ಬೆಳೆಸುವಮೂಲಕ ಸಮೃದ್ಧ ಜೀವನ ನಿಮ್ಮದಾಗಿಸಿಕೋಳ್ಳುವಂತೆ ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಶಾಲಾ ಮುಖ್ಯೋಪಾದ್ಯಾಯ ವಿ.ಎಮ್.ಅವಜಿ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ಫಕ್ಕೀರಪ್ಪ ಸವಣೂರ, ಬ್ಯಾಂಕಿನ ಸಿಂಬಂದಿಗಳಾದ ರೇಣುಕಾ ನೆಲ್ಲೂರ, ರೇಖಾ ವಡ್ಡರ, ಲಕ್ಷ್ಮೀ ಹೊಸಮನಿ, ಸುನಿತಾ ಕೋರಿಶೆಟ್ಟರ, ಪೂಜಾ ಶಿಗ್ಗಾವಿ, ಮಂಜುನಾಥ, ಬಸವರಾಜ ಅರಳೇಶ್ವರ, ವಿರೇಶ ಕಮ್ಮಾರ, ನಂದಾ ಹರವಿ, ಮಂಜುಳಾ ತಳ್ಳಳ್ಳಿ, ಸುಭಾಷಗೌಡ ಪಾಟೀಲ, ಬಸಯ್ಯ ಈಳಗೇರ, ನೀರ್ಮಲಾ ಈಳಗೇರ, ಅನಿತಾ ಗಿರಿಯಪ್ಪಗೌಡರ, ಸಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
*****