ಲೋಕದರ್ಶನವರದಿ
ರಾಣೇಬೆನ್ನೂರು02: ಆಧುನಿಕ ಬದುಕಿನಲ್ಲಿ ಸಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಮಾನಸಿಕ ಶಾಂತಿ-ನೆಮ್ಮದಿ ಮತ್ತು ಆರೋಗ್ಯ ಬದುಕು ಇಲ್ಲದೇ ಮನುಷ್ಯ ನಿತ್ಯವೂ ತೊಳಲಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಯೋಗಗುರು ಬಾಬಾ ರಾಮ್ದೇವಜೀ ಅವರ ಪತಂಜಲಿ ಯೋಗಸಮಿತಿಯು ತನ್ನ ಯೋಗದ ಮೂಲಕ ವಿಶ್ವನ್ನು ಆರೋಗ್ಯದತ್ತ ಕೊಂಡ್ಯೊಯುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ವಚನ ಸಾಹಿತಿ ಮಲ್ಲಿಕಾಜರ್ುನ ಮಳಲಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಆದಿಶಕ್ತಿ ಧ್ಯಾನಮಂದಿರದಲ್ಲಿ ಜಿಲ್ಲಾ ಪತಂಜಲಿ ಯೋಗಸಮಿತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್ 64ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಯೋಗದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಸ್ವಾಸ್ಥ್ಯವಾಗಿದ್ದರೆ, ಸಮಸ್ಥ ಸಮಾಜವೂ ಸಹ ಸ್ವಾಸ್ಥ್ಯವಾಗಿರಲು ಸಾಧ್ಯ. ನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬ ನಾಗರೀಕರು, ಯುವಕರು, ಕನಿಷ್ಠ ಅವಧಿಯಾದರೂ ತಮ್ಮ ದಿನಚರಿಯಲ್ಲಿ ಯೋಗ,ಧ್ಯಾನ,ಪ್ರಾಣಾಯಾಮ ಅಳವಡಿಸಿಕೊಂಡಾಗ ಸ್ವಾಸ್ಥ್ಯ ಮತ್ತು ಸುಂದರ ಜೀವನವನ್ನು ಅನುಭವಿಸಲು ಸಾಧ್ಯವಾಗುವುದು ಎಂದ ಮಳಲಿ ಅವರು ಸ್ಥಳೀಯ ಪತಂಜಲಿ ಸಮಿತಿಯು ನಗರ ಮತ್ತು ತಾಲೂಕಿನಾಧ್ಯಂತ ತನ್ನ ಯೋಗಕೇಂದ್ರಗಳನ್ನು ಆರಂಭಿಸುವುದರ ಮೂಲಕ ಸಮಾಜ ಸೇವಾ ಕಾರ್ಯ ಮಾಡುತ್ತಲಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಯೋಗ ಸಾಧಕ ಕೆ.ಸಿ.ಕೋಮಲಾಚಾರ್ ಮಾತನಾಡಿತ್ತಾ ಅವರು ತಾಲೂಕಿನಲ್ಲಿ ಯೋಗ ಸಮಿತಿಯು ಕಳೆದ 15 ವರ್ಷಗಳಿಂದ ತನ್ನ ಸೇವಾ ಕಾರ್ಯ ಮಾಡುತ್ತಲಿದೆ. ಕನರ್ಾಟಕ ರಾಜ್ಯದಾಧ್ಯಂತ ಸಾವಿರಕ್ಕೂ ಹೆಚ್ಚು ಉಚಿತ ಯೋಗ ತರಬೇತಿ ಕೇಂದ್ರಗಳಲ್ಲಿ 5 ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ಸೇವಾ ನಿರತರಾಗಿದ್ದಾರೆ ಎಂದ ಅವರು ಕನರ್ಾಟಕದ ಪ್ರಭಾರಿ ಭವರ್ಲಾಲ್ ಆರ್ಯ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಯೋಗಉತ್ಸವವನ್ನಾಗಿ ಮಾಡಲು ಮುಂದಾಗಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಮಲ್ಲಿಕಾಜರ್ುನ ಮಳಲಿ ಮತ್ತು ಯೋಗ ವಿಶ್ವಧಾಖಲೆ ಸಾಧಕಿ ಕು.ಲೇಖನಾ ನಿರಂಜನ ಸೇರಿದಂತೆ ಮೊದಲಾದವರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಂಡಲ ಮಹಿಳಾ ಪ್ರಭಾರಿ ವಜ್ರೇಶ್ವರಿ ಲದ್ವಾ, ಬಿಎಸ್ಟಿ. ಅಧ್ಯಕ್ಷ ರಾಮ್ಸಿಂಗ್ ರಾಠೋಡ, ಯುವ ಪ್ರಭಾರಿ ಕೆ.ಜಿ.ದಿವಾಕರ ಮೂತರ್ಿ, ಪಿವಾಯ್ಎಸ್ ಅಧ್ಯಕ್ಷ ರವೀಂದ್ರ ಬಿಜಾಪುರ, ಯೋಗ ಸಾಧಕರಾದ ಆರ್.ಬಿ.ಪಾಟೀಲ, ಶಿವಾನಂದ ಬಡೆಂಕಲ್, ಕೃಷ್ಣಮೂತರ್ಿ ಐರಣಿ, ಶಶಿಕಲಾ ಬಡೆಂಕಲ್, ಪ್ರಕಾಶ್ ಮಾಗೋಡ, ಪ್ರಕಾಶ್ ಚಂದ್ರಶೇಖರಮಠ, ರೇಖಾ ರಮಾಳದ, ಶಿವಶಂಕರ್ ಬಣಕಾರ, ಕವಿತಾ ಕುಬಸದ, ಕೆ.ಜಿ.ಚವ್ಹಾಣ, ಸುವಣರ್ಾ ಬಣಕಾರ, ಜಗದೀಶ ಸುಣಗಾರ, ರಮೇಶ್ ಅಕರ್ಾಚಾರಿ, ಕೃಷ್ಣಾ ರಾಮ್ಪುರ, ಹೇಮಾ ತಾಳೂರು, ಲಲಿತಾ ಮೇಲಗಿರಿ, ಸರೋಜಿನಿ ಸುಣಗಾರ ಸೇರಿಂದತೆ ಮತ್ತಿತರರು ಪಾಲ್ಗೊಂಡಿದ್ದರು.