ಗುಳೇದಗುಡ್ಡ,ಫೆ.17: ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಇಲ್ಲಿನ ಜಾಮಿಯಾ ಮಸ್ಜಿದ್ ಕಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಾಮಿಯಾ ಮಸ್ಜಿದ್ ಶಾದಿ ಮಹಲ್ ನಲ್ಲಿ ಉಚಿತ ಹೃದಯ ರೋಗ, ನರರೋಗ, ಮೂತ್ರ ಪಿಂಡದ ಕಲ್ಲು ಹಾಗೂ ಸಾಮಾನ್ಯ ರೋಗ ತಪಸಣಾ ಶಿಬಿರ ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಜರುಗಿತು.
ತಜ್ಞ ವೈದ್ಯರು ರೋಗಿಗಳಿಗೆ ಉಚಿತ ತಪಾಸಣೆ ಮಾಡಿ ಸಲಹೆ ನೀಡಿದರು. ಬೆಳಿಗ್ಗೆ ಶಿಬಿರದ ಉದ್ಘಾಟನೆಯಲ್ಲಿ ಕಾಂಗ್ರೇಸ್ ಮುಖಂಡರಾದ ಹೊಳಬಸು ಶೆಟ್ಟರ್, ಸಂಜಯ ಬರಗುಂಡಿ, ಮುಬಾರಕ ಮಂಗಳೂರ, ಅಬ್ದುಲ್ರಜಾಕ ಕುದರಿ, ಸಲೀಂ ಮೋಮಿನ್, ಅಮೀನ್ ಬಾಗವಾನ್, ಮಹೆಬೂಬ್ ಭಾಗವನ್ ಸೇರಿದಂತೆ ಇತರರು ಭಾಗವಹಿಸಿದ್ದರು.