ಲೋಕದರ್ಶನ ವರದಿ
ಬಸವನಬಾಗೇವಾಡಿ 23: ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತ ಕಾಪಾಡುವಲ್ಲಿ ಸರಕಾರ ಹಲವು ಆರೋಗ್ಯಕರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದ್ದುಪಯೋಗ ಪಡೆದು ರೋಗ ಮುಕ್ತರಾಗಲು ಸಹಕರಿಸಿ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಎಂ. ಆರ್. ಚಾಂದಕವಟೆ ಹೇಳಿದರು.
ತಾಲೂಕಿನ ಕಾಮನಕೇರಿ ಗ್ರಾಮದ ಕಸ್ತೂರಿ ಭಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಕ್ಷಯರೋಗ (ಟಿಬಿ) ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಮನುಷ್ಯನ ಜೀವನದಲ್ಲಿ ಕ್ಷಯ ರೋಗ(ಟಿಬಿ) ಮಾರಕ ಕಾಯಿಲೆಗಳಲ್ಲಿ ಒಂದು ಅದು ಇತ್ತೀಚಿನ ದಿನದಲ್ಲಿ ತುಂಬಾ ಬೆಳೆಯುತ್ತಿದೆ ಅದನ್ನು ಹತ್ತಿಕಲು ಸರಕಾರ ಜನರಿಗಾಗಿ ಹಲವು ಆರೋಗ್ಯಕರ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಬಳಕೆ ಮಾಡಿಕೊಂಡು ಆರೋಗ್ಯವಂತ ಜೀವನ ನಡೆಸಲು ಸಲಹೆ ನೀಡಿದರು.
ಕಿರಿಯ ಆರೋಗ್ಯ ಸಹಾಯಕ ಎಂ. ಎಸ್. ಬಾಗೇವಾಡಿ, ಶ್ರೀಕಾಂತ ದೊಡ್ಡಪ್ಪನವರ, ಮಹಿಳಾ ಆರೋಗ್ಯ ಸಹಾಯಕಿ, ಎನ್. ಎಚ್. ನಿವಾಳಕೋಡಿ, ಡಿ.ಎಸ್. ಸಜ್ಜನ, ಮುಖ್ಯಧ್ಯಾಪಕಿ ಡಿ. ಬಿ. ಗುಂಡಾನವರ, ಭಾರತಿ ಪಾಡೆವಾರ, ನಿಂಗನಗೌಡ ಪಾಟೀಲ ಸೇರಿದಂತೆ ಶಾಲಾ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಶಾಲೆ ಎಲ್ಲಾ ಮಕ್ಕಳು ಭಾಗವಹಿಸಿದ್ದರು. ಇದಕ್ಕೂ ಮುಂಚೆ ಕಾಮನಕೇರಿ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಪ್ರಮುಖ ಬೀದಿಗಳ ಮೂಲಕ ಸಾರ್ವಜನಿಕರಲ್ಲಿ ಕ್ಷಯ ರೋಗದ ಅರಿವು ಮುಡಿಸುವ ಕಾರ್ಯಕ್ರಮ ನಡೆಯಿತು.