ಬಳ್ಳಾರಿ ಜಿಲ್ಲಾಸ್ಪತ್ರೆ ಐಸೋಲೆಟೆಡ್ ವಾರ್ಡ್ ಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ

ಬಳ್ಳಾರಿ,  ಮಾ. 26, ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರು  ಕೋವಿಡ್-19 ಹರಡುವಿಕೆ ತಡೆಯಲು ಮುಂಜಾಗ್ರತಾ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ.  ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ಬಳ್ಳಾರಿ ಜಿಲ್ಲಾ ಆಸ್ಪತ್ರೆ ಕೊವಿಡ್-19 ಐಸೊಲೇಟೆಡ್ ವಾರ್ಡ್ ಗೆ ಖುದ್ದಾಗಿ ಸಚಿವರು ಭೇಟಿ ಕೊಟ್ಟು ಶಂಕಿತರಲ್ಲಿ ಭರವಸೆ ತುಂಬಿದ್ದಾರೆ. ಶ್ರೀರಾಮುಲು  ಅವರು ಸಂಪೂರ್ಣ ಸುರಕ್ಷಿತ ಮಾಸ್ಕ್, ಡ್ರೆಸ್ ಕೋಡ್ ಹಾಗೂ ಗ್ಲೌಸ್  ಧರಿಸಿ ಚಿಕಿತ್ಸೆ  ಪಡೆಯುತ್ತಿರುವ ಶಂಕಿತರಲ್ಲಿ ಧೈರ್ಯ ತುಂಬಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗದಂತೆ  ಚಿಕಿತ್ಸೆ ಪಡೆಯುವಂತೆ ತಿಳುವಳಿಕೆ ಮೂಡಿಸಿದ್ದಾರೆ.ಇದೇ ಸಂದರ್ಭದಲ್ಲಿ  ಕೊರೊನಾ ವೈರಸ್ ಹರಡದಂತೆ ತಡೆಯಲು ರಚಿಸಲಾಗಿರುವ ಟಾಸ್ಕ್ ಫೋರ್ಸ್ ಟೀಂ ಪರಿಶೀಲನೆಯನ್ನು  ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಅವರು ಮಾಡಿದ್ದಾರೆ.