ಆರೋಗ್ಯ ಭಾರತಕ್ಕೆ ಶ್ರಮಿಸುವ ಅವಶ್ಯಕತೆ ಇದೆ

ಲೋಕದರ್ಶನ ವರದಿ

ರಾಮದುರ್ಗ 27:  ತಾಲೂಕನ್ನು ಅಭಿವೃದ್ಧಿಯಲ್ಲಿ ಮಾದರಿಯಾಗಿಸಲು ರಾಜ್ಯ ಸಕರ್ಾರದಿಂದ ಗ್ರಾಮೀಣ ಪ್ರದೇಶ ಮತ್ತು ನಗರದ ಅಭಿವೃದ್ಧಿಗಾಗಿ  986 ಕೋಟಿ ರೂ.ಗೂ ಅಧಿಕ ಅನುದಾನ ಮಂಜೂರ ಮಾಡಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

71ನೇ ಗಣರಾಜ್ಯೋತ್ಸವದ ಅಂಗವಾಗಿ ದಿ.26ರಂದು ತೇರಬಝಾರದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ, ಮಲಪ್ರಭಾ ನದಿಯ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ರೂ. 16 ಕೋಟಿ, ಮಲಪ್ರಭಾ ನದಿಯ ತಡೆಗೊಡೆ ನಿಮರ್ಾಣಕ್ಕೆ ರೂ. 135 ಕೋಟಿ, ಆರಾಧನಾ ಯೋಜನೆಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ರೂ. 164 ಲಕ್ಷ, ಮುಜರಾಯಿ ಇಲಾಖೆಯಿಂದ ರೂ. 40 ಲಕ್ಷ, ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ರೂ. 14 ಕೋಟಿ ಮತ್ತು ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಅಭಿವೃದ್ಧಿಗೆ ರೂ. 30 ಕೋಟಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ವಿಶ್ವದ ಅತಿ ದೊಡ್ಡ ಲಿಖಿತ ಸಂವಿದಾನ ಭಾರತದ್ದಾಗಿದೆ ಈ ಸಂವಿಧಾನ ರಚನೆ ಮಾಡಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಶ್ರಮದ ಫಲವಾಗಿ ಇಂದು ಪ್ರತಿಯೊಬ್ಬರು ಮೂಲಭೂತ ಹಕ್ಕುಗಳನ್ನು ಅನುಭವಿಸುತ್ತಿದ್ದು ಅದರ ದುರುಪಯೋಗ ಮಾಡಿಕೊಳ್ಳದೆ ದೇಶದ ಅಭಿವೃದ್ಧಿಗೆ ಮತ್ತು ದೇಶ, ರಾಜ್ಯ ಮತ್ತು ನಮ್ಮ ಗ್ರಾಮ ಸ್ವಚ್ಛವಾಗಿಡುವ ಮೂಲಕ ಸ್ವಚ್ಛ ಭಾರತ, ಆರೋಗ್ಯ ಭಾರತಕ್ಕೆ ಶ್ರಮಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಅರಮನೆ ಆವರಣದಲ್ಲಿ ತಹಶೀಲ್ದಾರ ಗಿರೀಶ ಸ್ವಾದಿ ಧ್ವಜಾರೋಹಣ ನೇರವೇರಿಸಿ, ಪೊಲೀಸ್, ಎನ್ಸಿಸಿ ಹಾಗೂ ಗೃಹರಕ್ಷಕ ದಳದ ಗೌರವ ರಕ್ಷೆ ಸ್ವೀಕರಿಸಿ  ಸಂದೇಶ ನೀಡಿದರು. ಗಣರಾಜ್ಯೋತ್ಸವದ ಅಂಗವಾಗಿ ಸಮರ್ಪಣ ವಿದ್ಯಾಪೀಠದ 71 ವಿದ್ಯಾಥರ್ಿಗಳ ಪುಲ್ವಾಮಾ ದಾಳಿಯ ಸಮೂಹ ನೃತ್ಯ ಎಲ್ಲರನ್ನೂ ಆಕಷರ್ಿಸಿತು.

ಧ್ವಜಾರೋಹಣದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಾ ಆಡಳಿತ ವಿದ್ಯಾಥರ್ಿಗಳಿಗೆ ನಡೆಸಿದ ವಿವಿಧ ಸ್ಪಧೆರ್ೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಸಕ ಮಹಾದೇವಪ್ಪ ಯಾದವಾಡ, ಜಿಪಂ ಸದಸ್ಯರಾದ ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಶಿವಕ್ಕ ಬೆಳವಡಿ, ತಹಶೀಲ್ದಾರ ಗಿರೀಶ ಸ್ವಾದಿ, ತಾಪಂ ಇಓ ಮುರಳಿಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್. ಆಲಾಸೆ, ಸಮಾಜ ಕಲ್ಯಾಣಾಧಿಕಾರಿ ಕೆ. ಎಸ್. ಕಕರ್ಿ, ಹೆಸ್ಕಾಂ ಎಇಇ ರಾಮಕೃಷ್ಣ ಗುಣಗಾ, ದೈಹಿಕ ಶಿಕ್ಷಣಾಧಿಕಾರಿ ಪಿ. ಡಿ. ಕಾಲವಾಡ ಸೇರಿದಂತೆ ಹಲವರಿದ್ದರು.