ಆರೋಗ್ಯ, ಸಹಾನುಭೂತಿ ಮತ್ತು ಸಮುದಾಯ ಸೇವೆಗೆ ಹೆಚ್ಚಿನ ಆದ್ಯತೆ: ತಂಬ್ರಳ್ಳಿ
Health, compassion and community service are top priorities: Tambralli
ಕೊಪ್ಪಳ 19: ಆರೋಗ್ಯವೇ ಭಾಗ್ಯ ಜನರ ಆರೋಗ್ಯದ ಕಡೆ ಹೆಚ್ಚು ಗಮನಕೊಟ್ಟು ಬಡ ನಿರ್ಗತಿಕರ ಬಗ್ಗೆ ಸಹಾನುಭೂತಿ ಮತ್ತು ಸಮುದಾಯದ ಸೇವೆಯೇ ನಮ್ಮ ಸಂಸ್ಥೆಯ ಗುರಿಯಾಗಿದ್ದು ಅದಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಲ್ಲಾ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅಭಿಪ್ರಾಯ ಪಟ್ಟರು.
ಅವರು ನಗರದ ಹೊರವಲಯದಲ್ಲಿರುವ ಸಮೂಹ ಸಾಮರ್ಥ್ಯ ಕೇಂದ್ರದ ಬಡ ನಿರ್ಗತಿಕ ವ್ಯಕ್ತಿಗಳಿಗೆ ಅತಿ ಅವಶ್ಯಕಳ್ಳ ಬ್ಯಾಕ್ ಸಪೋರ್ಟ್ ಬೆಲ್ಟನ್ನು ಹಿರಿಯ ಸದಸ್ಯರಾದ ಡಾ,ರಾಧಾ ಕುಲಕರ್ಣಿ ಅವರು ದಾನದ ರೂಪದಲ್ಲಿ ನೀಡಿದ ಬೆಲ್ಟನ್ನು ವಿತರಣೆ ಮಾಡಿ ಸರಳ ಸಾಂಕೇತಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಅತಿ ಅವಶ್ಯಕವಳ್ಳ ಬ್ಯಾಟ್ ಸಪೋರ್ಟ್ ಬೆಲ್ಟ, ಈ ಉಪಕರಣ ಗೆಸ್ಟರ್ ದೈಹಿಕ ಪರಿಹಾರವನ್ನು ಒದಗಿಸುವ ಮತ್ತು ಚಲನಶೀಲತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದ ಅವರು ಆರೋಗ್ಯ ,ಸಹಾನುಭೂತಿ, ಮತ್ತು ಸಮುದಾಯ ಸೇವೆಗೆ ನಮ್ಮ ಕ್ಲಬ್ ನ ನಿರಂತರ ಬದ್ಧತೆ ಯನ್ನು ಪ್ರತಿ ಬಿಂಬಿಸುತ್ತದೆ, ಸಮುದಾಯದ ಸೇವೆಗೆ ನಮ್ಮ ಕ್ಲಬ್ ಸದಾ ಸಿದ್ಧವಾಗಿ ನಿರಂತರವಾಗಿ ತನ್ನ ಸೇವೆ ಮುಂದುವರಿಸುತ್ತದೆ ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಹಿರಿಯ ಸದಸ್ಯರು ಹಾಗೂ ಮಾರ್ಗದರ್ಶಕರಾದ ಡಾ, ರಾಧಾ ಕುಲಕರ್ಣಿ ಸದಸ್ಯರಾದ ಅನಿತಾ ಬಜಾರ್ ಮಠ ಮತ್ತು ಸುಮಂಗಲಾ ಹಂಚಿನಾಳ ಸೇರಿದಂತೆ ಸಾಮರ್ಥ್ಯ ಕೇಂದ್ರದ ಹಂಪಣ್ಣ ಮತ್ತು ಬಸಪ್ಪ ಅಲ್ಲದೆ ಇತರ ಮಹಿಳಾ ಸದಸ್ಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 