ಬಾಗಲಕೋಟೆಗೆ ಪಾರಂಪರಿಕ ವೈದ್ಯರು

ಬಾಗಲಕೋಟೆ: ಕಳೆದ ಹಲವಾರು ತಲೆಮಾರುಗಳಿಮದ ಶತಶತಮಾನಗಳಿಂದ ಗಿಡಮೂಲಿಕೆಗಳ ಚೂರ್ಣ ತಯಾರಿಸಿ ಮಾನವನ ಕೆಲ ರೋಗ ಭಾದೆಗಳನ್ನು ಹೋಗಲಾಡಿಸುವ ಪಾರಂಪರಿಕ ವೈದ್ಯರು ನವನಗರದ ಕೆಲವೆಡೆ ಕಾಣಸಿಗುತ್ತಿದ್ದಾರೆ.

ಫುಟ್ಪಾತ್ ಮೇಲೆ ಚಿಕ್ಕ ಚಿಕ್ಕ ತೆರೆದ ಡಬ್ಬಿಗಳಲ್ಲಿ ಹಲವಾರು ರೀತಿಯ ಗಿಡಮೂಲಿಕೆಗಳನ್ನು ಪ್ರದರ್ಶನಕ್ಕಿಟ್ಟಿರುವ ಈ ಪಾರಂಪರಿಕ ವೈದ್ಯರು ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡು ಮನುಷ್ಯನ ಸಾಧಾರಣ ರೋಗಗಳಿಗೆ ಔಷಧಿ ನೀಡುತ್ತಾರೆ. ಮೂಲತ ಹುಬ್ಬಳ್ಳಿಯವರಾದ ಇವರು ಪ್ರತಿ ನಗರದಲ್ಲಿ 15 ರಿಂದ 20 ದಿನ ವಾಸವಿದ್ದು, ಔಷಧಿ ಮಾರಾಟ ಮಾಡುತ್ತಾರೆ. 

 ಪಾರಂಪರಿಕ ಔಷಧಿಗಳನ್ನು ಮೊದಲು ಅರಣ್ಯದಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ಗಿಡಮೂಲಿಕೆ ಸಂಗ್ರಹಕ್ಕೆ ನಿರ್ಭಂದ ಹೇರಿರುವುದರಿಂದ ಬೇರೆಡೆ ಖರೀದಿಸಿ ಚೂರ್ಣ ಔಷಧಿ ತಯಾರಿಸಲಾಗುತ್ತಿದೆ. ಈಗ ಹೈದರಾಬಾದಿನ ಗೋಪಾಲ್ದಾಸ್, ಕೃಷ್ಣದಾಸ್, ಮದನಪಾಲ್, ಆಯುವರ್ೇದಿಕ್, ಯುನಾನಿ ಮೆನಿಸ್, ಧಾರವಾಡದ ಸಿದ್ದಲಿಂಗಪ್ಪ, ಹುಬ್ಬಳ್ಳಿಯ ಛತ್ರಿ ತಿಪ್ಪಣ್ಣ ಅವರಿಂದ ಔಷಧಿಗಳನ್ನು ಹೋಲ್ಸೇಲ್ ಖರೀದಿಸುತ್ತಿದ್ದಾರೆ.

ಈ ಅಶ್ವಗಂಧ ಚೂರ್ಣವನ್ನು ಅಶ್ವಗಂಧ, ದಾಳಿಂಬೆಹಣ್ಣು, ಜಾಜಿಕಾಯಿ, ಅಕ್ರೋಡಕಾಯಿ, ಖಬರ್ಾನಿಕಾಯಿ, ಮಾಸಿಕಾಯಿ, ತಾರೆಕಾಯಿ, ನಲ್ಲಿಕಾಯಿ, ಕಪ್ಪು ಅರಳೆಕಾಯಿ, ಜಾಪತ್ರಿ, ರಾಂಪತ್ರಿ, ಬಾದಾಮಿ, ಅಡವಿ ಏಲಕ್ಕಿ, ಅಮೃತ ಬಳ್ಳಿ, ಮದನಕಾಮೇಶ್ವರ, ಮದನಮಸ್ತು, ನಾಗಕೇಸರಿ, ಕಸ್ತೂರಿ ಅರಿಶಿಣ, ಮರದ ಅರಿಶಿಣ, ನೆಲಬೇವು, ಜೀರಗಿ, ಕಾಡು ಜೀರಗಿ, ಗಂಧಕಚೋರ, ಚಂಗಲ್ವಕೋಷ್ಠಿ, ಬಾಲು ಮೆಣಸು, ಸ್ಕೆಂದಲವಣ, ಸುನಮುಖ, ಇಸಬಗೋಬಬೀಜ, ಮೆಂತ್ಯೆಗಳು, ಬಿಳಿ ಉಪ್ಪು, ಗಸಗಸೆ, ಚಿಲ್ಲಬೀಜ, ಸರಸ್ವತಿ ಎಲೆ ಸೇರಿದಂತೆ ಇತರೆ ಮೂಲಿಕೆಗಳಿಂದ ತಯಾರಿಸಿ ಕೊಡುತ್ತಾರೆ.

ಈ ಚೂರ್ಣ ಸೇವಿಸುವದರಿಂದ ಅಸಿಡಿಟಿ, ಉದರ ಶೂಲ, ಬಲಹೀನತೆ, ಅಸ್ತಮಾ, ಉಸಿರಾಟದ ತೊಂದರೆ, ಕೀಲುನೋವು, ಸುಧೀರ್ಘಕಾಯಿಲೆಗಳು, ನಿಶ್ಯಕ್ತಿ, ಸ್ತ್ರೀಯರಿಗೆ ಗಭರ್ಾಶಯ ರೋಗಗಳು, ಬಿಳುಪು, ಮುಟ್ಟಿನ ತೊಂದರೆ, ಕಾಮಾಲೆ, ರಕ್ತವೃದ್ಧಿ ಇಲ್ಲದಿರುವಿಕೆ, ನರಗಳ ದೌರಭಲ್ಯ, ಸ್ತ್ರೀಯರಿಗೆ ಗಭರ್ಾಶಯ ರೋಗಗಳು, ಬಿಳುಪು, ಕೆಂಪು, ಮುಟ್ಟಿನ ತೊಂದರೆ, ಸ್ತ್ರೀ-ಪುರುಷರಿಗೆ ಮೂತ್ರದಲ್ಲಿ ಉರಿ, ತಲೆ ತಿರುಗುವಿಕೆ, ತಲೆ ನೋವು, ಕಣ್ಣು-ಕಾಲು ಉರಿ, ಕಾಮಾಲೆ ರೋಗ, ನಂಜು ಕಾಮಾಲೆ, ಬಲಹೀನತೆ ಸೇರಿದಂತೆ ಇತರೆ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂದು ಪಾರಂಪರಿಕ ವೈದ್ಯ ಎಸ್.ರಾಜು ಹೇಳುತ್ತಾರೆ. ಪಾರಂಪರಿಕ ವೈದ್ಯರು ಮೂಲತ ಹೆಳವರು, ಗಂಟೆ ಹೆಳವರಾಗಿದ್ದು, ಜಾನುವಾರುಗಳಿಗೆ ಆಯುವರ್ೇದ ಔಷಧಿಗಳನ್ನು ನೀಡುತ್ತಿದ್ದರು. ಪಾರಂಪರಿಕ ವೈದ್ಯರೆಂದು ಸರಕಾರದಿಂದ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. ಕ್ರಮೇಣವಾಗಿ ಜನರಿಗೂ ಔಷಧಿ ನೀಡುತ್ತಾ ಬಂದಿದ್ದಾರೆ.