ಗ್ರಾಮೀಣ ಭಾಗದ ಮುಖ್ಯೋಪಾಧ್ಯಾಯರ ಕಾರ್ಯಾಗಾರ


ಗದಗ 31: ದಿ. 30ರಂದು  ನಗರದ  ಬ್ರೈಟ್ ಹಾರಿಜೋನ್ ಶಾಲೆಯಲ್ಲಿ ನಡೆದ  ಸ್ವಚ್ಛ ಸವರ್ೆಕ್ಷಣ 2018 ರ ಗದಗ ಗ್ರಾಮೀಣ ಭಾಗದ ಮುಖ್ಯೋಪಾಧ್ಯಾಯರ ಕಾರ್ಯಾಗಾರವನ್ನು   ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ  ಎಚ್.ಎಸ್. ಜನಗಿ  ಉದ್ಘಾಟಿಸಿದರು.   ಅವರು  ಮಾತನಾಡಿ  ಬಯಲು ಬಹಿದರ್ೆಸೆ ಮುಕ್ತ ನಗರ ಹಾಗೂ ಗ್ರಾಮೀಣದ ಗುರಿಯಾಗಬೇಕು.  ಈಗಾಗಲೇ ಗದಗ ತಾಲೂಕು ಹಂತ ಹಂತವಾಗಿ ಗುರಿಯನ್ನು ತಲುಪುತ್ತಿದೆ.  ಶೌಚಾಲಯದ ಬಳಕೆ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ.  ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜವಾಬ್ದಾರಿಯು ಶಿಕ್ಷಕರು ಮತ್ತು ಮಕ್ಕಳದ್ದಾಗಬೇಕು ಎಂದರು.  ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಸ್ವಚ್ಛತೆಗೆ ಗ್ರಾಮ ಪಂಚಾಯತ್ದಿಂದ ಎಲ್ಲ ಅನುಕೂಲ ಕಲ್ಪಿಸಲಾಗುವುದೆಂದು ಎಚ್.ಎಸ್. ಜನಗಿ  ತಿಳಿಸಿದರು.   

         ಕಾರ್ಯಕ್ರಮದಲ್ಲಿ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಮ್. ಖಾನ್, ಸಮನ್ವಯ ಅಧಿಕಾರಿಗಳಾದ ಕಂಬಳಿ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಯು.ಎಮ್. ಹಿರೇಮಠ, ತಾಲೂಕು ಘಟಕದ ಅಧ್ಯಕ್ಷರಾದ ಡಿ.ಎಸ್. ತಳವಾರ, ಕಾರ್ಯದಶರ್ಿ ಹಡಪದ, ರಾಜ್ಯ ಸಕರ್ಾರಿ ನೌಕರರ ಸಂಘದ ಕಾರ್ಯದಶರ್ಿಗಳಾದ ಕೆ.ಎಫ್. ಹಳ್ಯಾಳ,  ಪರಿಷತ್ ಸದಸ್ಯರಾದ ಯು.ಬಿ. ಪೊಲೀಸ ಪಾಟೀಲ, ಇ.ಸಿ.ಓ ವಿವೇಕಾನಂದಗೌಡ ಪಾಟೀಲ, ಹಾಗೂ ಬಿ ವೃಂದದ ಅಧ್ಯಕ್ಷರಾದ ಮುಳಗುಂದ ಮಠ ಭಾಗವಹಿಸಿದ್ದರು.  ಸ್ವಚ್ಛ ಭಾರತ ಮಿಷನ್ ತಾಲೂಕು ಸಂಯೋಜಕರಾದ ಎಸ್.ಟಿ. ಕುಲಕಣರ್ಿ  ಕಾರ್ಯಕ್ರಮವನ್ನು ನಿರೂಪಿಸಿದರು.  ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.