ಹಾರೂಗೇರಿ ಹಾವಿ ಆವರಣದಲ್ಲಿ ನಡೆದ ಪ್ರೌಢಶಾಲಾ ವಲಯ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಮುಖ್ಯಾಧ್ಯಾಪಕಿ ಆರ್.ಬಿ.ಖೇಮಲಾಪೂರೆ ಚಾಲನೆ
Headmistress R.B. Khemalapure inaugurated the high school zonal-level departmental sports meet held
ಲೋಕದರ್ಶನ ವರದಿ
ಹಾರೂಗೇರಿ 24 : ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ನಾಯಕತ್ವ ಮನೋಭಾವ ಮತ್ತು ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸರದಾರ ಜಮಾದಾರ ಹೇಳಿದರು. ಪಟ್ಟಣದ ಹಾವಿ ಆವರಣದಲ್ಲಿ ಮಂಗಳವಾರ ನಡೆದ ಪ್ರೌಢಶಾಲಾ ವಲಯ ಮಟ್ಟದ ಇಲಾಕಾ ಕ್ರೀಡಾಕೂಟವನ್ನುದ್ದೇಶಿಸಿ ಮಾತನಾಡಿದ ಅವರು ಬಾಲ್ಯದಲ್ಲಿಯೇ ಸೂಕ್ತ ತರಬೇತಿ ಮತ್ತು ಅವಕಾಶ ದೊರೆತರೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಾಗಿ ಬೆಳೆಯಲು ಸಾಧ್ಯ. ಕ್ರೀಡೆಯಲ್ಲಿ ಎತ್ತರಕ್ಕೆ ಏರಿ ದೇಶದ ಘನತೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿಯಬೇಕೆಂದು ಹೇಳಿದರು. ಹಾವಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಂ.ವಿ.ಕೋಳೆಕರ ಕ್ರೀಡಾಜ್ಯೋತಿಗೆ ಚಾಲನೆ ನೀಡಿ ಮಾತನಾಡುತ್ತ ನಾನಾ ಶಾಲೆಗಳ ನಡುವೆ ಸ್ನೇಹ, ಕ್ರೀಡಾಸ್ಪೂರ್ತಿ ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕ್ರೀಡಾ ಚಟುವಟಿಕೆಗಳು ಉತ್ತಮ ವೇದಿಕೆಯಾಗಿದೆ ಎಂದರು. ಪ್ರೌಢಶಾಲೆ ಮುಖ್ಯಾಧ್ಯಾಪಕಿ ಆರ್.ಬಿ.ಖೇಮಲಾಪೂರೆ ಕ್ರೀಡಾ ಧ್ವಜಾರೋಹನ ನೇರವೇರಿಸಿ ಮಾತನಾಡಿ ಇಂದಿನ ಆಹಾರ ಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತಿದ್ದು, ನಿತ್ಯ ವ್ಯಾಯಾಮ, ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದಬಹುದೆಂದು ಹೇಳಿದರು. ಸಿಆರ್‌ಪಿ ಮಹಾಂತೇಶ ಮುಗಳಖೋಡ, ದೈಹಿಕ ಶಿಕ್ಷಕರಾದ ಎ.ಬಿ.ಹಳಿಂಗಳಿ, ಆರ್.ಎಸ್.ಬೆಳಗಲಿ, ಎಸ್.ಜಿ.ಕೇರಿಮನಿ, ಎಸ್.ಜೆ.ನಲವಡೆ, ಬಿ.ಎಸ್.ಅಂಗಡಿ, ಜೆ.ಜಿ.ಗಡಾದ, ಎಸ್.ಎಚ್.ಮಾಚಕನೂರ, ಸುಕುಮಾರ ಶಿರಹಟ್ಟಿ, ಜೀವನ ಬಾಬಣ್ಣವರ, ವಿಜಯ ನಾಗರಾಳೆ, ಪ್ರಭು ವ್ಯಾಪಾರಿ, ಸಂತೋಷ ತೇರದಾಳ, ಎಸ್.ಡಿ.ಕಾಗವಾಡೆ ಮೊದಲಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಎಂ.ಡಿ.ನಾಯಿಕ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 