ಲೋಕದರ್ಶನ ವರದಿ
ಶಿರಹಟ್ಟಿ 16: ಅಹಿಂಸೆಯನ್ನು ಬೋಧಿಸುವದರೊಂದಿಗೆ ಸಮಾಜದ ಉದ್ಧಾರಕ್ಕೆ ಉದಯಿಸಿದ ದೈವಿಪುರುಷ ಸಂತ ಸೇವಲಾಲ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ತಾಲೂಕ ಕಚೇರಿಯಲ್ಲಿ ನಡೆದ ಸಂತ ಸೇವಲಾಲರ 281ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ಮೌಢ್ಯತೆಯನ್ನು ತೊಡೆದು ಹಾಕಲು ಸತತವಾಗಿ ಶ್ರಮಿಸಿದ ಸಂತರು ಸೇವಾಲಲರು. ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಇವರು ಮನುಷ್ಯನಿಗೆ ಮಾತ್ರವಲ್ಲದೆ ಉಳಿದ ಜೀವಜಂತುಗಳಿಗು ಒಳ್ಳೆಯದಾಗಲಿ ಎಂಬ ಸಂದೇಶವನ್ನು ತಮ್ಮ ವಾಣಿಗಳ ಮೂಲಕ ಸಾರಿದ್ದರು ಎಂದು ಹೇಳಿದರು.
ನಂತರ ಮಾತನಾಡಿದ ತಹಸೀಲ್ದಾರ ಯಲ್ಲಪ್ಪ ಗೋಣೆಣ್ಣವರ ಕಾಡುಗಳಲ್ಲಿ ವಾಸಿಸುತ್ತಿದ್ದ ಬಂಜಾರ ಸಮಾಜವು ಮುಂದೊಂದು ದಿನ ನಾಡಲ್ಲಿ ಮುಖ್ಯವಾಹಿನಿಗೆ ಬರುವದೆಂಬ ಕನಸು ಸೇವಾಲಾಲರು ಅಂದೇ ಕಂಡಿದ್ದರು ಎಂದು ತಿಳಿಯುತ್ತದೆ. ಇಂದು ಈ ಸಮಾಜ ವಿದ್ಯೆ ಮತ್ತು ರಾಜಕೀಯದಲ್ಲಿ ಮುಂದೆಯಿದೆ. ಸಂತರ ಜಯಂತಿ ಆಚರಿಸುವದರ ಮೂಲಕ ಅವರ ಜೀವನ ಶೈಲಿಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನಮ್ಮಲ್ಲಿನ ಕೆಟ್ಟ ಗುಣಗಳು ಹೋದರೆ ಜೀವನ ಸಾರ್ಥಕತೆ ಹೊಂದುತ್ತದೆ ಎಂದು ಹೇಳಿದರು.
ತಾಪಂ ಅಧ್ಯಕ್ಷೆ ಗಿರಿಜವ್ವಾ ಲಮಾಣಿ, ಬಾಪುಜಿ ಕಪ್ಪತ್ತನವರ, ತಾಪಂ ಸದಸ್ಯ ದೇವಣ್ಣ ಲಮಾಣಿ, ಜಾನು ಲಮಾಣಿ, ಸಿಪಿಐ ಆರ್.ಎಚ್.ಕಟ್ಟಿಮನಿ, ಸಮಾಜದ ತಾಲೂಕ ಅಧ್ಯಕ್ಷ ಶಿವಪ್ಪ ಲಮಾಣಿ, ರಾಣ್ಣ ಲಮಾಣಿ (ಶಿಗ್ಲಿ), ಈರಣ್ಣ ಚವ್ಹಾಣ, ತಿಪ್ಪಣ್ಣ ಲಮಾಣಿ, ನಾಗರಾಜ ಲಕ್ಕುಂಡಿ, ಡಾ. ಚಂದ್ರು ಲಮಾಣಿ, ಸತೀಶ ಪುಜಾರಿ, ಎಸ್.ಬಿ.ಹರ್ತಿ, ರಾಮಮುತರ್ಿ, ಚಂದ್ರಶೇಕರ ನರಸಮ್ಮನವರ ಮುಂತಾದವರು ಇದ್ದರು. ಎಮ್.ಕೆ.ಲಮಾಣಿ ಕಾರ್ಯಕ್ರಮ ನಿರೂಪಿಸಿದರು.