ಲೋಕದರ್ಶನ ವರದಿ
ಬೈಲಹೊಂಗಲ 15: ಇಡೀ ಸಮಾಜಕ್ಕೆ ಒಳಿತನ್ನು ಬಯಸಿ ಮಹಾನ್ ಸಂದೇಶ ಸಾರಿದವರು ಸಂತ ಸೇವಾಲಲರು ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಅವರು ಪಟ್ಟಣದ ತಹಸೀಲ್ದಾರ ಸಭಾಭವನದಲ್ಲಿ ಶನಿವಾರ ಸಂತ ಸೇವಾಲಾಲ ಅವರ 281 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಂತ ಸೇವಾಲಾಲ ಅವರು ತಮ್ಮ ಭಜನೆಗಳ ಮೂಲಕ ಸಮಾಜದಲ್ಲಿದ್ದ ಅಸಮಾನತೆಯನ್ನು ನಿವಾರಿಸಲು ಶ್ರಮಿಸಿದ ಮಹಾನಸಂತ. ಇಂದಿನ ಯುವ ಸಮೂಹ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸರಕಾರದಿಂದ ಸಮಾಜಕ್ಕೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು, ಪ್ರತಿಯೊಬ್ಬರೂ ಶಿಕ್ಷಣವಂತರಾದಾಗ ಮಾತ್ರ ಸಮಾಜ ಏಳ್ಗೆ ಹೊಂದಲು ಸಾಧ್ಯ ಆದ್ದರಿಂದ ಸಮಾಜದ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು. ಬಂಜಾರ ಸಮಾಜದ ತಾಲೂಕಾಧ್ಯಕ್ಷ ಅಧ್ಯಕ್ಷ ಶಂಕರ ಕಾರಬಾರಿ, ಬಿ.ವಾಯ್.ನಾಯಿಕ್ ಮಾತನಾಡಿ, ಸಮಾಜದ ಏಳ್ಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ವೇದಿಕೆ ಮೇಲೆ ತಹಸೀಲ್ದಾರ ಡಾ.ಡಿ.ಎಚ್.ಹೂಗಾರ, ಶಂಕರ ಪೂಜೇರಿ, ಶಂಕರ ನಾಯ್ಕ ಇದ್ದರು.
ಬಂಜಾರ ಸಮುದಾಯದ ಸೋಮು ಲಮಾಣಿ, ಗುರು ಕಾರಬಾರಿ, ಶಿವಾನಂದ ರಜಪೂತ, ವಿಷ್ಟು ಕಾರಬಾರಿ, ಹೇಮಂತ ಲಮಾಣಿ, ಚಂದ್ರು ರಾಥೋಡ, ಶಂಕರ ರಾಥೋಡ, ಕೃಷ್ಣ ಲಮಾಣಿ, ದಯಾನಂದ ರಾಥೋಡ, ಶ್ರೀನಿವಾಸ ಕಾರಬಾರಿ ಸವಿತಾ ರಜಪೂತ ಹಾಗೂ ಸಮಾಜ ಭಾಂದವರು ಇದ್ದರು. ಶಂಕರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಶಿಕಲಾ ನಾಯ್ಕ ಸ್ವಾಗತಿಸಿದರು. ಕು.ಶ್ರದ್ದಾ ರಜಪೂತ ವಂದಿಸಿದರು. ಇದೇ ಸಂದರ್ಬದಲ್ಲಿ ಸಮಾಜ ಭಾಂದವರು ಬಂಜಾರ ಸಮುದಾಯದವರಿಗಾಗಿ ಸಮುದಾಯ ಭವನ ನಿರ್ಮಿಸಲು ಉಪವಿಭಾಗಾಧಿಕಾರಿ ಅವರಿಗೆ ಮನವಿ ಮಾಡಿಕೊಂಡರು.