ಬೆಳಗಾವಿ, 10: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನರ ಧೈರ್ಯ, ಸಾಹಸ, ಹೋರಾಟ, ಸಾಮಾಜಿಕ ಕಳಕಳಿ ಪ್ರತಿಯೊಬ್ಬರಿಗೂ ಮಾದರಿ ಎಂದರು.
ಟಿಪ್ಪು ಸುಲ್ತಾನ ರೈತರು ಹಾಗೂ ದೀನದಲಿತರ ಏಳ್ಗೆಗೆ ಶ್ರಮಿಸಿದರು. ಟಿಪ್ಪು ಸುಲ್ತಾನ ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಡನೆ ವೀರಾವೇಶದಿಂದ ಹೋರಾಡಿದರು. ತನ್ನ ಮಕ್ಕಳನ್ನು ಸಹ ಒತ್ತೆ ಇಟ್ಟರು. ತನ್ನ ಉಸಿರಿನ ಕೊನೆಯವರೆಗೂ ರಾಜ್ಯದ ಉಳಿವಿಗಾಗಿ ಹೋರಾಟ ನಡೆಸಿದರು ಎಂದು ಹೇಳಿದರು.
ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಟಿಪ್ಪು ಸುಲ್ತಾನ್ ಮಹಾನ ನಾಯಕ. ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೊಳಿಸಿದ್ದರು. ಮೈಸೂರು ಪ್ರಾಂತ್ಯಕ್ಕೆ ಟಿಪ್ಪುವಿನ ಕೊಡುಗೆ ಅಪಾರ ಎಂದರು.
ಟಿಪ್ಪು ಕನ್ನಡಾಭಿಮಾನಿಯಾಗಿದ್ದರು, ಕನ್ನಡಕ್ಕೆ ಪ್ರಾಶಸ್ತ್ಯ ನೀಡಿದ್ದರು. ಟಿಪ್ಪು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿಲ್ಲ. ಟಿಪ್ಪು ಪಾಸರ್ಿ ಭಾಷೆಯನ್ನು ಹೇರಿದ್ದರೆ ಮೈಸೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗಿರುತ್ತಿತ್ತು. ಕನರ್ಾಟಕದಲ್ಲಿ ರೇಷ್ಮೆ ಪ್ರಸಿದ್ಧಿಯಾಗಲು ಟಿಪ್ಪು ಕಾರಣ. ಯುದ್ದದ ಸಂದರ್ಭದಲ್ಲಿ ಮಿಸೈಲ್ಗಳನ್ನು ಬಳಸಿದ ಪ್ರಥಮ ಹೋರಾಟಗಾರ ಟಿಪ್ಪು ಎಂದು ತಿಳಿಸಿದರು.
ಮೌಲಾನ ಮುಸ್ತಾಕ ಅಹಮ್ಮದ್ ಅಶ್ರಫಿ ಉಪನ್ಯಾಸ ನೀಡಿ, ಟಿಪ್ಪು ಚಿಕ್ಕ ವಯಸ್ಸಿನಲ್ಲೇ ಶೌರ್ಯ, ಸಾಹಸ ಅಳವಡಿಸಿಕೊಂಡಿದ್ದನು. ಟಿಪ್ಪು ಎಂದಿಗೂ ಸುಳ್ಳು ಹೇಳಲಿಲ್ಲ. ಪರ ಸ್ತ್ರೀಯರೊಂದಿಗೆ ಅಗೌರವದಿಂದ ನಡೆದುಕೊಂಡಿಲ್ಲ. ಇಂದಿನ ಮಕ್ಕಳು, ಯುವಕರು ಟಿಪ್ಪುವಿನ ತತ್ವಾದರ್ಶ ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಅರುಣ ಕಟಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಟಿಪ್ಪುವಿನ ವಿಚಾರಗಳು ಇಂದಿಗೂ ಪ್ರಸ್ತುತ. ಮಹಾನ ನಾಯಕರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ, ತಹಶೀಲ್ದಾರ ಮಂಜುಳಾ ನಾಯಕ, ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಪುಂಡಲೀಕ ಅನವಾಲ, ಸಮಾಜದ ಮುಖಂಡರಾದ ಪಯಾಜ್ ಅಹ್ಮದ್ ಸೌದಾಗರ, ಆರೀಪ ಕಟಗೇರಿ, ಫೈಜಲ್ ಮುಲ್ಲಾ ಉಪಸ್ಥಿತರಿದ್ದರು.
ಸಾಧಕ ವಿದ್ಯಾಥರ್ಿಗಳಿಗೆ ಸನ್ಮಾನ:
ಎಸ್ಸೆಸ್ಸೆಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೊಹಮ್ಮದ್ ಕೈಪ್ ಮುಲ್ಲಾ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಾಧಕ ವಿದ್ಯಾಥರ್ಿಗಳನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸನ್ಮಾನಿಸಲಾಯಿತು.
ಎಕ್ಸಲೆಂಟ್ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ನಾಡಗೀತೆ ಹಾಡಿದರು. ಹುಲಿಕಟ್ಟಿಯ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಮಕ್ಕಳು ದೇಶಭಕ್ತಿಗೀತೆ ಪ್ರಸ್ತುತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ನಿರೂಪಿಸಿದರು.