ಹಾವೇರಿ ಐತಿಹಾಸಿಕ, ಸಾಂಸ್ಕೃತಿಕ ಶ್ರೀಮಂತ ಜಿಲ್ಲೆ: ಸಚಿವ ಸಿ.ಟಿ.ರವಿ

ಹಾವೇರಿ:   ಹಾವೇರಿ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ.  ದಾರ್ಶನಿಕರು, ಸಂತರು, ದಾಸಶ್ರೇಷ್ಠರು, ಸ್ವಾತಂತ್ರ್ಯ ಹೋರಾಟಗಾರರು ಜನಿಸಿದ ಪುಣ್ಯ ಭೂಮಿ  ಈ ಜಿಲ್ಲೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ.ರವಿ ಅವರು ಪ್ರವಾಸೋದ್ಯಮ ಹಾಗೂ ಸಕ್ಕರೆ ಕಾಖರ್ಾನೆ ಸಚಿವರಾದ ಸಿ.ಟಿ. ರವಿ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮಗೋಷಿ ಉದ್ದೇಶಿಸಿ ಅವರು ಮಾತನಾಡಿದರು. 

  ಸರ್ವಜ್ಞ, ಕನಕದಾಸರು, ಶಿಶುನಾಳ ಶರೀಫರು, ಗಂಗೂಬಾಯಿ ಹಾನಗಲ್, ಅಂಬಿಗರ ಚೌಡಯ್ಯ, ಸೇರಿದಂತೆ ದಾಸಶ್ರೇಷ್ಠರನ್ನು ನೀಡಿರುವ ಜಿಲ್ಲೆ. ಇದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ.  ಹೊಯ್ಸಳ ಕಾಲ, ವಿಜಯನಗರ, ಚಾಲುಕ್ಯ ಕಾಲದ ಹಾಗೂ ಇನ್ನು ಹಲವಾರು ನೂರಾರು ದೇವಾಲಯವಿರುವ ಜಿಲ್ಲೆಯಾಗಿದ್ದು ಚಾರಿತ್ರ್ಯಿಕ ಹಿನ್ನೆಲೆ ಒಳಗೊಂಡಿದೆ. 

ಜಗತ್ತು, ರಾಷ್ಟೃ ಹಾಗೂ ರಾಜ್ಯದ ಜನರನ್ನು ಆಕಷರ್ಿಸಲು ಸಮಗ್ರ ಪ್ರವಾಸ ನೀತಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೆನೆ.  ಈವರೆಗೆ 20 ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು ಇದು 21 ನೇ  ಜಿಲ್ಲೆಯಾಗಿದೆ.

ಒಂದು ರಾಜ್ಯ ಹಲವು ಜಗತ್ತು ಪ್ರವಾಸೋದ್ಯಮದ ಘೋಷವಾಕ್ಯವಾಗಿದೆ. ರಾಜ್ಯದಲ್ಲಿ 319 ಪ್ರಮುಖ ಪ್ರವಾಸಿ ಕೇಂದ್ರ ಗುರುತಿಸಲಾಗಿದೆ. ಹಂಪಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ 100 ಪಾರಂಪರಿಕ ತಾಣಗಳು, 5 ರಾಷ್ಟ್ರೀಯ ಉದ್ಯಾನವನಗಳು, 30 ವನ್ಯಜೀವಿಧಾಮಗಳು, ಶಿವನಸಮುದ್ರ, ಜೋಗ ಸೇರಿದಂತೆ 40 ಜಲಪಾತಗಳು, ನಂದಿ, ಮುಳ್ಳಯ್ಯನಗಿರಿ ಸೇರಿದಂತೆ 17 ಗಿರಿಶ್ರೇಣಿಗಳು, 320 ಕಿ.ಮಿ. ಕರಾವಳಿ ತೀರ ಹೊಂದಿದಂತೆ ಸಾಂಸ್ಕೃತಿಕ ಶ್ರೀಮಂತಿಕೆ  ಹಾಗೂ ಭಾಷಾ ಸೊಗಡು ರಾಜ್ಯಕ್ಕಿದೆ. ಉತ್ತರಕನರ್ಾಟಕ, ಮಲೆನಾಡು, ಕರಾವಳಿ, ಸೇರಿದಂತೆ ವಿವಿಧ ರೀತಿಯ ಆಹಾರ ಪದ್ಧತಿಯಿದೆ. ಕಂಬಳ, ಯಕ್ಷಗಾನ, ಬಯಲಾಟ,  ಹೋರಿಬೆದರಿಸುವ ಸ್ಪಧರ್ೆ, ಕುಸ್ತಿ, ಇವುಗಳು ಪ್ರವಾಸಿಗರನ್ನು ಹಾಗೂ ಪ್ರವಾಸೋದ್ಯಮವು ಆಕಷರ್ಿಸುತ್ತವೆ. 

      ಸಮಗ್ರ ಪ್ರವಾಸಿ ನೀತಿ ಜಾರಿಗೆ ತಂದು ಖಾಸಗಿ ಹೂಡಿಕೆದಾರರಿಗೆ ಆಮಂತ್ರಣ ನೀಡಿ  ಖಾಸಗಿ ಹೋಡಿಕೆ ಮೇಲೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲಾಗುವುದು. ನವಂಬರ್ 15 ಕ್ಕೆ ನನ್ನ ಪ್ರವಾಸ ಮುಗಿಯುತ್ತೆ.  ಪ್ರವಾಸೋದ್ಯಮದಲ್ಲಿರುವ ಹುದ್ದೆಗಳ ಭತರ್ಿಗೆ ಪ್ರಯತ್ನಿಸುತ್ತೇನೆ.  ಪ್ರಾದೇಶಿಕ ಕಚೇರಿಯನ್ನು ಪುರಾತತ್ವ ಹೊಂದಿದ ಈ ಭಾಗಕ್ಕೆ ತರಲು ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. 

   ಜನರ ಸಹಭಾಗಿತ್ವದಲ್ಲಿ ಸಮಾಜ ಕೈ ಜೋಡಿಸಿದರೆ, ನಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಇಲ್ಲಿ ಸಮಾಜ ಕೇಂದ್ರಿತ ವ್ಯವಸ್ಥೆಯಾಗಬೇಕು ಎಂದು ಹೇಳಿದರು. 

  ಜಯಂತಿಗಳನ್ನು ಜಾತಿ ಚೌಕಟ್ಟಿನೊಳಗೆ ಮಾಡಿದರೆ  ಅಪರಾಧವಾಗುತ್ತದೆ. ದಾರ್ಶನಿಕರೆಲ್ಲರೂ ಜಾತಿ ಮೀರಿದ ಮಹಾತ್ಮರು, ಮಹಾತ್ಮರ ಬದುಕಿನ ರೀತಿಗೆ ಅಪಚಾರ ಮಾಡಿದಂತಾಗುತ್ತದೆ. ಸಮಾಲೋಚನೆ ನಡೆಸಿದ ನಂತರ ಬಂದ ಅಭಿಪ್ರಾಯ ಸಂಗ್ರಹಿಸಿ ಜಯಂತಿ ಆಚರಣೆ ಬಗ್ಗೆ ಒಂದು ನಿಧರ್ಾರ ಕೈಗೊಳ್ಳಲಾಗುವುದು ಎಂದು ಹೇಳಿದರು. 

   ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ನೆಹರು ಓಲೇಕಾರ, ಸಿ.ಎಂ.ಉದಾಸಿ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ರಮೇಶ್ ದೇಸಾಯಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ು ನಬಾಲದಂಡಿ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.