ಬಂದ್ ಪ್ರತಿಭಟನೆಯಲ್ಲಿ ಹಾಜರ್, ಶಿಕ್ಷಕರ ದಿನಾಚರಣೆಯಲ್ಲೂ ಭಾಗಿ ಶಾಸಕ ಮಹಾಂತೇಶ ಕೌಜಲಗಿ ಕ್ರಮದಿಂದ ಕಾಂಗ್ರೆಸ್ಗೆ ಇರಿಸು-ಮುರಿಸು

    ಬೈಲಹೊಂಗಲ 11: ಕಾಂಗ್ರೆಸ್ ಪಕ್ಷ ಮತ್ತು ಹಲವು ಒಕ್ಕೂಟಗಳು ಸೇರಿ ತೈಲಬೆಲೆ ಏರಿಕೆಯನ್ನು ಖಂಡಿಸಿ ಕರೆದಿದ್ದ ಭಾರತ ಬಂದ್ ಸಮೀಪದ ಹೊಸೂರ ಗ್ರಾಮದಲ್ಲಿ ಯಾವುದೆ ಬಿಸಿ ಮುಟ್ಟದೆ ಸ್ವತಃ ಪ್ರತಿಭಟಣೆಯಲ್ಲಿ ಪಾಲ್ಗೊಂಡವರೆ ಸ್ಥಳಿಯ ಪ್ರೌಢ ಶಾಲೆಯಲ್ಲಿ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಅವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಮಾಡಿದ್ದು ಪಕ್ಷದ ಕೆಲವರಿಗೆ ಇರಿಸು ಮುರಿಸು ಉಂಟು ಮಾಡಿತು.

   ಪ್ರತಿ ವರ್ಷ ಸೆ.5 ರಂದು ಶಿಕ್ಷಕರ ದಿನಾಚರಣೆ ಮಾಡುವದು ವಾಡಿಕೆ. ಅಂದು ಸಕರ್ಾರಿ ರಜೆ ಅಥವಾ ಶಾಲಾ ಮಟ್ಟದಲ್ಲಿ ರಜೆ ಇದ್ದರೆ ನಂತರ ದಿನಗಳಲ್ಲಿ ಮಾಡುವದು ಸಹಜ. ಆದರೆ ಭಾರತ ಬಂದ್ ಕರೆದ ಸ್ವ ಪಕ್ಷೀಯ ಶಾಸಕರೊಬ್ಬರು ಒಂದು ಸ್ಥಳದಲ್ಲಿ ಪ್ರತಿಭಟನೆ ಕೈಗೊಂಡು ಪಕ್ಷಕ್ಕೆ ನಿಷ್ಠೆ ತೋರಿಸಿ, ಜಿಲ್ಲಾಧಿಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರೂ ತಮ್ಮ ಮತಕ್ಷೇತ್ರದಲ್ಲಿಯ ಹೊಸೂರ ಗ್ರಾಮದ ಪ್ರೌಢ ಶಾಲೆಯಲ್ಲಿ ಸೋಮವಾರ ಸಮಾರಂಭಕ್ಕೆ ಹಾಜರಾಗುವ ಮೂಲಕ ಕ್ಷೇತ್ರದಲ್ಲಿದ್ದ ಬಿಜೆಪಿ ಸೇರ್ಪಡೆ ಆಗುವ ಉಹಾಪೋಹಕ್ಕೆ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಲ್ಲಿ ಚಚರ್ೆಗೆ ಗ್ರಾಸವಾಗಿದೆ.

    ಜಿಲ್ಲಾಧಿಕಾರಿಗಳು ಮುಂಜಾಗೃತ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ. ಆಕಸ್ಮಿಕವಾಗಿ ಅಹಿತಕರ ಘಟನೆಗಳು ಜರುಗಿದರೆ ಯಾರು ಹೊಣೆಗಾರರೆಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುವಂತಾಗಿದೆ.