ಹಸೀನಾ ಅಗಸಿಮನಿಗೆ ಪಿಎಚ್‌ಡಿ ಪದವಿ ಪ್ರದಾನ

Hasina Agasimani was conferred with a Ph.D

ವಿಜಯಪುರ 15: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಹಸೀನಾ ಅಗಸಿಮನಿ ಅವರು ಸಲ್ಲಿಸಿದ್ದ “ಸೋಷಿಯೊ-ಎಕನೋಮಿಕ್ ಕಂಡೀಷನ್ಸ ಆಫ್ ಮುಸ್ಲಿಂ ವುಮನ್ ಇನ್ ಅರಬನ್ ಸ್ಲಮ್ಸ್‌” ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.  

ಹಸೀನಾ ಅಗಸಿಮನಿ ಅವರು ಸಮಾಜಶಾಸ್ತ್ರ ವಿಭಾಗದ ಪ್ರೊ.ವಿಜಯಾ ಬಿ ಕೋರಿಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಹಸೀನಾ ಅಗಸಿಮನಿ ಅವರನ್ನು ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ. ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ ಅವರು ಅಭಿನಂದಿಸಿದ್ದಾರೆ.