ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ? : ಡಾ.ಅಶ್ವತ್ಥ್ ನಾರಾಯಣ್ ಪ್ರಶ್ನೆ

ಬೆಂಗಳೂರು,ಸೆ 10    ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆಗೆ ಮುಂದಾಗಿರುವ ಒಕ್ಕಲಿಗ ಸಮಾಜದ ವಿರುದ್ಧ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್  ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.ಜಾತಿ ಇರುವುದು ಸಮಾಜದ ಉದ್ಧಾರಕ್ಕಾಗಿಯೇ ಹೊರತು ಭ್ರಷ್ಟಾಚಾರ, ಬೇನಾಮಿ ಆಸ್ತಿ ಮಾಡಿದವರ ಪರವಾಗಿ ಕೆಲಸ ಮಾಡಲು ಅಲ್ಲ ಎಂದಿದ್ದಾರೆ. 

ನಗರದ ಮಹಾಲಕ್ಷ್ಮೀ ಬಡಾವಣೆಯ ವಾಸವಿ ದೇವಾಲಯದಲ್ಲಿ ನಡೆದ  ಹರಿಹರಪುರ ಮಠದ ಸಚ್ಚಿದಾನಂದ ಅಭಿನವ ಭಾರತಿ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ,ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಡಿ.ಕೆ ಶಿವಕುಮಾರ್ ಬೆಂಬಲಿಗರು ಹಾಗೂ ಒಕ್ಕಲಿಗ ಸಮುದಾಯ ಪ್ರತಿಭಟನೆ ಆಯೋಜಿಸಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ದೇಶದ ಸಂವಿಧಾನವನ್ನು ಗೌರವಿಸುವುದರ ಜೊತೆ ಕಾನೂನಿನ ಪರಿಪಾಲನೆಯೂ ಮುಖ್ಯ. ಕಾನೂನನ್ನು ವಿರೋಧಿಸುವ ಕೆಲಸ ನಡೆಯಬಾರದು ಎನ್ನುವ ಮೂಲಕ ಪ್ರತಿಭಟನೆಯ ಹೆಸರಿನಲ್ಲಿ ಹಿಂಸೆ ನಡೆದರೆ ಕಾನೂನುಕ್ರಮ ಜರುಗಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.  

ಡಿ.ಕೆ ಶಿವಕುಮಾರ್  ಅವರೇ ಈ ನೆಲದ ಕಾನೂನಿನ ಮೇಲೆ ತಮಗೆ ಗೌರವ ಇದೆ ಎಂದಿದ್ದಾರೆ. ಸಮಾಜ ಭ್ರಷ್ಟಾಚಾರದಲ್ಲಿ ತತ್ತರಿಸಿದ್ದು, ಜಾತಿಯನ್ನೂ ಮೀರಿ ಭ್ರಷ್ಟಾಚಾರರಹಿತ ಸಮಾಜ ನಿಮರ್ಾಣ ಮಾಡಬೇಕು.ಈ ದಾರಿಯಲ್ಲಿ ಎಲ್ಲರೂ ಒಂದಾಗಿ ನಡೆಯಬೇಕು.  ಹೀಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದರು. 

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಅವರು ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

 ಕಾಂಗ್ರೆಸ್ ಹಾಗು ಮೈತ್ರಿ ಸಕರ್ಾರದ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಅವರು ಅನುಭವಿ ರಾಜಕಾರಣಿಯಾಗಿದ್ದಾರೆ.ಕಾಂಗ್ರೆಸ್ ಹಾಗೂ ಮೈತ್ರಿ ಸಕರ್ಾರದ ಅವಧಿಯ ಯಾವುದೇ ಕಾರ್ಯಕ್ರಮಗಳನ್ನು ಬಿಜೆಪಿ ಸಕರ್ಾರ ಸ್ಥಗಿತಗೊಳಿಸಿಲ್ಲ. ಹಣ ದುರ್ಬಳಕೆಯನ್ನ ತಡೆಯುವುದು ಮಾತ್ರ ನಮ್ಮ ಉದ್ದೇಶ. ಅನ್ನಭಾಗ್ಯ, ಕೃಷಿಭಾಗ್ಯ, ವೈಟ್ ಟಾಪಿಂಗ್ ಯೋಜನೆಯಲ್ಲಿ ಆಗಿರುವ ಲೋಪಸರಿಪಡಿಸುವುದು ನಮ್ಮ ಕರ್ತವ್ಯ. ಹೀಗಾಗಿ ಕೆಲವು ಪ್ರಕರಣನ್ನು  ತನಿಖೆಗೆ ವಹಿಸಿದ್ದೇವೆಯೇ ಹೊರತು ಯಾವುದೇ ಯೋಜನೆಯನ್ನು ನಿಲ್ಲಿಸುವ  ದುರುದ್ದೇಶ ಸಕರ್ಾರಕ್ಕಿಲ್ಲ. ಅವ್ಯವಹಾರ, ತಪ್ಪಾಗಿದ್ದರೆ ಸರಿಪಡಿಸೋದು ಮುಖ್ಯಮಂತ್ರಿಗಳು ಮತ್ತು ಸಕರ್ಾರದ ಜವಾಬ್ದಾರಿಯಾಗಿರುತ್ತದೆ ಎಂದು ಸಕರ್ಾರದ ನಡೆಯನ್ನು ಸಮಥರ್ಿಸಿಕೊಂಡರು. 

ಗೋಹತ್ಯೆ ನಿಷೇಧ ಸಂವಿಧಾನದಲ್ಲೇ ಇದೆ. ಹೊಸದಾಗಿ ಕಾನೂನು ತರುವುದಕ್ಕಿಂತ ಹಾಲಿ ಇರುವ ಕಾಯಿದೆಯ ಸಮರ್ಪಕ ಅನುಷ್ಠಾನ ಹಾಗೂ ಕಾಯಿದೆಯಲ್ಲಿನ ಲೋಪಗಳಿಗೆ ತಿದ್ದುಪಡಿ ತರುವ ಮೂಲಕ ಬಲಗೊಳಿಸಲು ಸಕರ್ಾರ ಸಿದ್ಧವಿದೆ. ಗೋ ಹತ್ಯೆ ಮಾಡಬಾರದು ಎಂಬುದು ತಮ್ಮ ಸ್ಪಷ್ಟ ನಿಲುವು ಎಂದರು. 

ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಪ್ರಯತ್ನವಲ್ಲ, ಪಕ್ಷಕ್ಕೆ  ಜನ ಬಹುಮತ ಕೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ. ಈ ಬಗ್ಗೆ ಮೇಯರ್ ಚುನಾವಣೆ ವೇಳೆಗೆ ಎಲ್ಲವೂ  ಸ್ಪಷ್ಟವಾಗಲಿದೆ ಎಂದರು. 

ಕೇಂದ್ರ ಸಕರ್ಾರದ ಮೋಟಾರು ವಾಹನ ಕಾಯಿದೆ ದಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಕರ್ಾರದ ಈ ನಿಯಮ ಸಮಾಜಕ್ಕೆ ಪೂರಕವಾಗಿದೆ. ಸಮಾಜದ ಸುರಕ್ಷತೆಗೆ ನಿಯಮ ಸಮರ್ಪಕವಾಗಿ ಅನುಷ್ಠಾನ ಆಗಬೇಕು.ದಂಡ ಹಾಕಿ ಜನರಿಂದ ಹಣ ಸಂಗ್ರಹಿಸುವುದು ಸಕರ್ಾರದ ಉದ್ದೇಶವಲ್ಲ.ಅಪಘಾತ,ವಾಹನಗಳ ದುರುಪಯೋಗ,ಕಾನೂನು ಪಾಲನೆ ನಮ್ಮ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. 

ಜೆಡಿಎಸ್ ಅನರ್ಹ ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ನ್ಯಾಯಾಲಯದಲ್ಲಿ ನ್ಯಾಯ ದೊರಕುವ ವಿಶ್ವಾಸ ಇದೆ. ಮತ ಹಾಕುವವರು ಕ್ಷೇತ್ರದ ಪುಣ್ಯಾತ್ಮರಿಗೆ ತಮ್ಮ  ಸೇವೆ ಕ್ಷೇತ್ರಕ್ಕೆ ಅಗತ್ಯ ಇದೆಯೋ, ಇಲ್ಲವೋ ಎಂಬ ಬಗ್ಗೆ ಕ್ಷೇತ್ರದ ಜನ ತೀಮರ್ಾನ ಮಾಡುತ್ತಾರೆ. ಕ್ಷೇತ್ರದ ಜನರ ಮಧ್ಯೆಯೇ ಇದ್ದು ಜನ ಸೇವೆ ಮುಂದುವರೆಸಿದ್ದೇನೆ. ದೇವೇಗೌಡರು ನಮ್ಮ ಗುರುಗಳು, ಅವರು ಏನು ಹೇಳಿದರೂ ಸ್ವೀಕಾರ ಮಾಡುತ್ತೇನೆ.ನಮ್ಮ ಗುರುಗಳ ವಿರುದ್ಧ ಗೆಲ್ಲುವ ವಿಶ್ವಾಸ ಇದೆ  ಎನ್ನುವ ಮೂಲಕ ದೇವೇಗೌಡರಿಗೆ ತಿರುಗೇಟು ನೀಡಿದರು. 

ಪತ್ನಿ ಹೇಮಲತಾ ಗೋಪಾಲಯ್ಯ ಅವರನ್ನು ಮೇಯರ್ ಅಭ್ಯಥರ್ಿಯಾಗಿ ಸ್ಪರ್ದೇಸುವ ವಿಚಾರ ಬಗ್ಗೆ ಮಾತನಾಡಿದ ಅವರು,ಈ ಬಗ್ಗೆ ಬೆಂಗಳೂರು ನಗರದ  ಶಾಸಕರು ಸಭೆ ಸೇರಿ ಚರಚಿಸಿ ತೀರ್ಮಾನ ಮಾಡುತ್ತೇವೆ ಎಂದರು.