ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ

ನವದೆಹಲಿ, ಜ.29, ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷ್ ವರ್ಧನ್ ಶ್ರಿಂಗ್ಲಾ ಬುಧವಾರ ಅಧಿಕಾರ ವಹಿಸಿಕೊಂಡರು. "ಎಂಇಎ ತಂಡದಿಂದ ಆತ್ಮೀಯ ಸ್ವಾಗತ" ಎಂದು ಸಚಿವಾಲಯದ ಅಧಿಕೃತ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ."ಭಾರತದ  ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಒಂದು ದೊಡ್ಡ ಗೌರವ ಮತ್ತು  ನಿಜವಾಗಿಯೂ ವಿನಮ್ರ ಅನುಭವ" ಎಂದು ಶಿಂಗ್ಲಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು."ಹಾಗೆ  ಮಾಡುವಾಗ, ವೃತ್ತಿಪರತೆ ಮತ್ತು ಸಮಗ್ರತೆಯ ಅತ್ಯುನ್ನತ ಗುಣಮಟ್ಟವನ್ನು  ಎತ್ತಿಹಿಡಿದಿರುವ ನನ್ನ ಹಿರಿಯರ ಹಾದಿಯನ್ನು ನಾನು ಹಿಂಬಾಲಿಸುತ್ತಿದ್ದೇನೆ ಎಂಬ ಅರಿವು ನನಗಿದೆ" ಎಂದು ಅವರು ಹೇಳಿದರು.ಮಂಗಳವಾರ  ನಿವೃತ್ತರಾದ ಅವರ ಇಬ್ಬರು ಹಿಂದಿನ ಅಧಿಕಾರಿಗಳಾದ ವಿಜಯ್ ಗೋಖಲೆ ಮತ್ತು ಈಗಿನ ವಿದೇಶಾಂಗ  ಸಚಿವ ಡಾ.ಎಸ್.ಜೈಶಂಕರ್ ಅವರನ್ನು ವಿಶೇಷವಾಗಿ ಸ್ಮರಿಸಿದ್ದಾರೆ."ಡಾ. ಜೈಶಂಕರ್ ಅವರು ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ನೇರವಾಗಿ ಅವರ ಅಧೀನದಲ್ಲಿ ಕೆಲಸ ಮಾಡಿದ ಭಾಗ್ಯವನ್ನು ನಾನು ಹೊಂದಿದ್ದೇನೆ ಮತ್ತು ಅವರ ಮಾರ್ಗದರ್ಶನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಇತ್ತೀಚಿನವರೆಗೂ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಶ್ರಿಂಗ್ಲಾ ಹೇಳಿದ್ದಾರೆ.