ಕೊವಿಡ್ -೧೯ ವಿರುದ್ದ ಕಠಿಣ ನಿರ್ಣಯಗಳು ಅನಿವಾರ್ಯ; ಪ್ರಧಾನಿ ಮೋದಿ

ನವದೆಹಲಿ, ಮಾ ೨೯, ಕೋವಿಡ್ -೧೯ರ  ವಿರುದ್ಧ   ನಡೆಸಲಾಗುತ್ತಿರುವ  ಸಮರದಲ್ಲಿ ಕಠಿಣ  ನಿರ್ಣಯಗಳು  ಅನಿವಾರ್ಯ  ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವದ ಹಲವು    ದೇಶಗಳ  ಪರಿಸ್ಥಿತಿಗಳನ್ನು ನೋಡಿದ ನಂತರ ದೇಶದಲ್ಲಿ  ಲಾಕ್ ಡೌನ್  ಜಾರಿಗೊಳಿಸುವ ನಿರ್ಧಾರ   ಕೈಗೊಳ್ಳಲಾಯಿತು  ಎಂದು   ತಿಳಿಸಿದ್ದಾರೆ. ತಮ್ಮ  ಜನಪ್ರಿಯ  ಆಕಾಶವಾಣಿಯ    “ಮನ್ ಕಿ ಬಾತ್”    ಕಾರ್ಯಕ್ರಮದಲ್ಲಿ   ದೇಶದ ಜನರನ್ನುದ್ದೇಶಿಸಿ ಮಾತನಾಡಿದ  ಪ್ರಧಾನಿ,  ಲಾಕ್ ಡೌನ್  ಕಾರಣದಿಂದ ಬಡ ಜನರಿಗೆ  ಉಂಟಾಗಿರುವ  ಸಂಕಷ್ಟಗಳಿಗಾಗಿ  ದೇಶದ ಜನತೆಗೆ    ಪ್ರಧಾನಿ  ಮೋದಿ  ಕ್ಷಮೆಯಾಚಿಸಿದ್ದಾರೆ.  ನಿಮ್ಮಲ್ಲಿ ಕೆಲವರಿಗೆ  ನನ್ನ ಮೇಲೆ ವಿಪರೀತ ಕೋಪ ಬಂದಿರಬಹುದು  ಎಂಬುದು  ನನಗೆ ತಿಳಿದಿದೆ. ಆದರೆ,   ಕೊರೊನಾ ವೈರಸ್  ವಿರುದ್ಧ  ಸಮರದಲ್ಲಿ ಇಂತಹ ಕಠಿಣ ನಿರ್ಧಾರಗಳು ಅನಿವಾರ್ಯವಾಗಿದೆ.  ಭಾರತದ ಜನರ ಆರೋಗ್ಯ  ರಕ್ಷಿಸಲು  ಈ ಕಠಿಣ ಕ್ರಮಗಳು   ಅತ್ಯಂತ  ಮುಖ್ಯವಾಗಿವೆ.  ಇನ್ನೂ ಕೆಲವು ದಿನಗಳ ಕಾಲ ಜನರು    ಲಕ್ಷ್ಮಣ ರೇಖೆಯನ್ನು ಪಾಲಿಸಲೇ ಬೇಕು.  ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸಹ  ಹಲವಾರು  ಜನರು ಸ್ವಯಂ- ನಿರ್ಬಂಧಕ್ಕೆ ಒಳಗಾಗಿದ್ದಾರೆ ಅವರೆಲ್ಲರನ್ನೂ ಪ್ರಧಾನಿ ಅಭಿನಂದಿಸಿದ್ದಾರೆ.
ಇನ್ನೂ ಕೆಲವರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೋಮ್ ಕ್ಯಾರೆಂಟೈನ್‌ನಲ್ಲಿ ಇರಬೇಕೆಂದು  ಸೋಚಿಸಿದ್ದರೂ,  ನಿಯಮ ಉಲ್ಲಂಘಿಸಿ ಹೊರಗೆ  ಸ್ವೇಚ್ಚೇಯಿಂದ  ಓಡಾಡುತ್ತಿದ್ದಾರೆ. ಅವರಿಗೆ  ನಾನು ಹೇಳುವುದು ಇಷ್ಟೇ... ಲಾಕ್ ಡೌನ್ ನಿಯಮಗಳನ್ನು ಪಾಲಿಸದಿದ್ದರೆ  ಕೊರೊನಾ   ವೈರಾಣು  ಅಪಾಯದಿಂದ  ನಮ್ಮನ್ನು ರಕ್ಷಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಅವರು ಹೇಳಿದರು.ಸಾಮಾಜಿಕ  ಅಂತರ  ಕಾಯ್ದುಕೊಳ್ಳುವಂತೆ     ಜನರಿಗೆ  ಮತ್ತೊಮ್ಮೆ  ಕರೆ ನೀಡಿದ ಪ್ರಧಾನಿ.   ಸಾಮಾಜಿಕ ಅಂತರ  ಅಂದರೆ  ಮಾನಸಿಕ ದೂರವಲ್ಲ ಎಂದು  ಸ್ಪಷ್ಟನೆ ನೀಡಿದ್ದಾರೆ.   ಕೋವಿಡ್ -೧೯ ವಿರುದ್ದ  ಧೈರ್ಯದಿಂದ  ಹೋರಾಡುತ್ತಿರುವ ಯೋಧರಿಗೆ   ಭಾರತ ನಮಸ್ಕರಿಸುತ್ತದೆ ... ಭಾರತಕ್ಕೆ  ಇದು   ಜೀವನ್ಮರಣ ಸಮಸ್ಯೆ ಎಂದು  ಕಳವಳ ವ್ಯಕ್ತಪಡಿಸಿದರು.
 ಕೊರೊನಾ   ವಿರುದ್ಧ  ವೈದ್ಯರು, ದಾದಿಯರು ಮತ್ತು  ಆರೋಗ್ಯ   ಸಿಬ್ಬಂದಿ ನಿರಂತರ  ಹೋರಾಡುತ್ತಿದ್ದಾರೆ. ಯಾವುದೇ   ಭೌತಿಕ ಪ್ರತಿಫಲ  ನಿರೀಕ್ಷಿಸದೆ ರೋಗಿಗಳಿಗೆ ಸೇವೆ ಸಲ್ಲಿಸುವವ  ಅತ್ಯುತ್ತಮ ವೈದ್ಯ ಎಂದು ಆಚಾರ್ಯ ಚರಕ  ಹೇಳಿದ್ದಾರೆ.  ಇಂತಹ  ಸೇವಾ ಭಾವದೊಂದಿಗೆ  ಸೇವೆ ಸಲ್ಲಿಸುತ್ತಿರುವ  ಪ್ರತಿಯೊಬ್ಬ ದಾದಿಯರನ್ನೂ   ವಂದಿಸಲು ಬಯಸುತ್ತೇನೆ ಎಂದು ಪ್ರಧಾನಿ  ವಿನಮ್ರದಿಂದ  ನುಡಿದಿದ್ದಾರೆ.   ಇಡೀ ಜಗತ್ತು.  ೨೦೨೦ ಅನ್ನು ಅಂತರರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸುತ್ತಿದೆ. ಸರಿಸಾಟಿಯಿಲ್ಲದ ಸಮರ್ಪಣೆಯ  ದಾದಿಯರ ಸೇವೆಯನ್ನುಪ್ರಧಾನಿ  ಮೋದಿ ಶ್ಲಾಘಿಸಿದರು. ಕರೋನಾ ವಿರುದ್ಧ  ಹೋರಾಟದಲ್ಲಿ ದಾದಿಯರು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ  ಮುಂಚೂಣಿಯಲ್ಲಿದ್ದಾರೆ ಎಂದರು.