ಮಾರುತಿ ಈಳಿಗೆರ್ ಗೆ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ಪ್ರಧಾನ
ಕೊಪ್ಪಳ 15: ತಾಲೂಕಿನ ಹಿಟ್ನಾಳ ಗ್ರಾಮದ ನಿವಾಸಿಯಾಗಿರುವ ಮಾರುತಿ ಇಳಿಗೇರ್ ಇವರು ಸದ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗಂಗಾವತಿ ಡಿಪೋ ದಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರುತಿ ಈ ಳಿಗೆರ್ ರವರು ಗಂಗಾವತಿ ಘಟಕದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅವರು ಸಂಗೀತ ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಜನಸಾಮಾನ್ಯರನ್ನು ರಂಜಿಸಿ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಅಲ್ಲದೆ ಅವರ ಕನ್ನಡಪರ ಉತ್ತಮ ಸೇವೆ ಪರಿಗಣಿಸಿ ಅವರನ್ನು ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಇಟಗಿ ಉತ್ಸವದಲ್ಲಿ ರವಿವಾರ ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ಚಾಲುಕ್ಯ ವಿಕ್ರಮಾದಿತ್ಯ ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸತ್ಕರಿಸಲಾಯಿತು.
ಈ ಹಿಂದೆಯೂ ಸಹ ಎರಡು ಮೂರು ವರ್ಷಗಳ ಹಿಂದೆ ಮಾರುತಿ ಈಳಿಗೆರ ರವರ ಉತ್ತಮ ಸಾಹಿತ್ಯ ಸಂಗೀತದ ಸೇವೆಗಾಗಿ ಇದೆ ಇಟಗಿ ಉತ್ಸವದಲ್ಲಿ ಅವರನ್ನು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿರುವದನ್ನು ಇಲ್ಲಿ ಸ್ಮರಿಸಬಹುದು.ಸಮಾರಂಭದಲಿ ಅನ್ನದಾನೇಶ್ವರ ಸಂಸ್ಥಾನ ಮಠ ಕುಕನೂರಿನ ಮಹಾದೇವ ದೇವರು, ಸಮ್ಮೇಳನದ ಅಧ್ಯಕ್ಷರಾದ ಬಸವರಾಜ್ ಅಡಿವೆಪ್ಪ ಗೌಡ್ರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಗೌರವಾಧ್ಯಕ್ಷರಾದ ಎಂಬಿ ಅಳವಂಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸದಸ್ಯರಾದ ಎಂ ಸಾಧಿಕ್ ಅಲಿ ಸಂಘಟಕರಾದ ಮಹೇಶ್ ಬಾಬು ಸುರುವೇ ಸೇರಿದಂತೆ ಜನಪ್ರತಿನಿಧಿಗಳು ವಿವಿಧ ಸಂಘಟನೆಗಳ ಮುಖ್ಯಸ್ಥರು ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಸಾರಿಗೆ ನಿಗಮ ಗಂಗಾವತಿ ಘಟಕ ದಲ್ಲಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕಲಾವಿದರಾಗಿ ಕಾರ್ಯ ಮತ್ತು ಸೇವೆ ಸಲ್ಲಿಸಿದ ಆವರಿಗೆ ರಾಜ್ಯಮಟ್ಟದ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ಲಭಿಸಿರುವುದಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ನೌಕರ ವರ್ಗ ಸೇರಿದಂತೆ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.