ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

Haralaiah elected unopposed as district president of the society

ಹಾವೇರಿ 27  :- ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷರಾಗಿ ನಗರದ ಪೃಥ್ವಿರಾಜ ಬೆಟಗೇರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸೋಮವಾರ ಪ್ರವಾಸಿ ಮಂದಿರದಲ್ಲಿ ಸಂಘದ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಂಘದ ಸದಸ್ಯರು ಹಾಗೂ ಸಮಾಜ ಬಾಂಧವರು ಪೃಥ್ವಿರಾಜ ಬೆಟಗೇರಿಯವರನ್ನು ಜಿಲ್ಲಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಧರ್ಮರಾಜ ದೊಡ್ಡಮನಿ, ಸಹಕಾರ್ಯದರ್ಶಿಯಾಗಿ ರೂಪೇಶ ಬಳ್ಳಾರಿ, ಉಪಧ್ಯಕ್ಷರನ್ನಾಗಿ ಸಾತಪುತೆ, ಡೀಕಪ್ಪ ಗಬ್ಬೂರ ಹಾಗೂ ಮೋಹನ ಕಾನಾಪೂರ. ಸಂಘಟನಾ ಕಾರ್ಯದರ್ಶಿಗಳನ್ನಾಗಿ ಪ್ರವೀಣ ಕುಂದರಗಿ,  ಹುಳ್ಳಿಕಾಶಿ. ಖಜಾಂಜಿಯಾಗಿ ಮಂಜುನಾಥ ಗಾಮನಗಟ್ಟಿ, ಮಹಿಳಾ ಪ್ರತಿನಿಧಿಯಾಗಿ ಲಲಿತಮ್ಮ ಗಂಜಿಗಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಪರಶುಮಾರ ಅರಕೇರಿ, ರಾಜ್ಯ ಖಜಾಂಚಿ ಮಂಜುನಾಥ ಹಂಜಗಿ, ಜಿಲ್ಲಾ ಅಧ್ಯಕ್ಷರ ಉಸ್ತುವಾರಿ ವಿದ್ಯಾಧರ ತೇರದಾಳ ಹಾಗೂ ಇತರರಿದ್ದರು.