ಲೋಕದರ್ಶನ ವರದಿ
ಸಿರುಗುಪ್ಪ25: ಜುಲೈ 27ರಂದು ಬಸವ ವಾದಿ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಉತ್ಸವದ ಪೂರ್ವಭಾವಿ ಸಭೆ, ಎಂ. ಸುನೀತಾ ಅವರ ಅಧ್ಯಕ್ಷತೆಯಲ್ಲಿ ಮಿನಿ ವಿಧಾನಸೌಧ ತಾಲ್ಲೂಕು ಕಚೇರಿಯಲ್ಲಿ ಅವರು ಮಾತನಾಡಿ ನಗರದ ಅಭಯ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಆಚರಿಸಲು ನಿರ್ಧರಿಸಿದೆ ಎಂದರು.
ಹಡಪದ ಅಪ್ಪಣ್ಣ ಸಂಘದ ಅಧ್ಯಕ್ಷ ಎಚ್. ಕೆ. ನಾಗರಾಜ್, ಉಪಾಧ್ಯಕ್ಷ ಕರಿಯಪ್ಪ,ಮುಖಂಡರಾದ ವಿರೇಶ, ಚನ್ನಬಸವ, ರಾಘವೇಂದ್ರ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಾಗಿ ಸಲಹೆ ಸೂಚನೆ ನೀಡಿದರೂ.
ಕಾರ್ಯಕ್ರಮದಲ್ಲಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ನಗರಸಭೆ ಅಧ್ಯಕ್ಷೆ ಎಂ. ಸವಿತಾ ಅರುಣಾ ಪ್ರತಾಪರೆಡ್ಡಿ, ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ನಬಿ ,ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಸದಸ್ಯರು, ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ.