ವರಕವಿ ಡಾ.ಬೇಂದ್ರೆ ಜನ್ಮದಿನಾಚರಣೆ

ವಿಜಯಪುರ, 4 : ನಗರದ ಲಯನ್ಸ್ ಬ್ಲಡ್ಬ್ಯಾಂಕ್ ಸಭಾಭವನದಲ್ಲಿ ಸಿರಿಗನ್ನಡ ವೇದಿಕೆ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ಡಾ.ದ.ರಾ. ಬೇಂದ್ರೆಯವರ 125ನೇ ಜನ್ಮದಿನ ಆಚರಿಸಲಾಯಿತು. 

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ಮಂಜುನಾಥ ಜುನಗೊಂಡ ಅವರು  ಡಾ|| ದ.ರಾ. ಬೇಂದ್ರೆಯವರ ಬದುಕು ಬರಹ ಕುರಿತು ಉಪನ್ಯಾಸ ನೀಡಿ, ಬೇಂದ್ರೆಯವರು ನೇರ ನಡೆ ನುಡಿ ಉಳ್ಳವರಾಗಿದ್ದರು. ಅವರು ಬರೆದ ಪ್ರತಿಯೊಂದು ಕಾವ್ಯವು ಇವತ್ತಿಗೂ ಎಲ್ಲರ ಮನದಲ್ಲಿ ಅಚ್ಚೊತ್ತಿದಂತಿವೆ. ಅವರು ಕೇವಲ ನಮ್ಮ ರಾಜ್ಯದಷ್ಟೇ ಅಲ್ಲ ಇಡೀ ವಿಶ್ವದ ಕವಿಯಾಗಿದ್ದರೆಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ|| ಜಿ.ಡಿ. ಕೋಟ್ಯಾಳ ಅವರು ಸಿರಿಗನ್ನಡ ವೇದಿಕೆಯ ಎಲ್ಲ ಕಾರ್ಯಕ್ರಮಗಳು ಜನಮೆಚ್ಚುಗೆ ಪಡೆದ ಕಾರ್ಯಕ್ರಮವಾಗಿದೆ ಎಂದು ಹೇಳಿದರು. 

ಡಾ|| ದ.ರಾ. ಬೇಂದ್ರೆ ಜನ್ಮದಿನ ನಿಮಿತ್ಯ ಹಮ್ಮಿಕೊಳ್ಳಲಾದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅವರು, ಕವತೆ ಬರೆಯುವದು ಅಷ್ಟು ಸುಲಭವಲ್ಲ ಯಾವುದೇ ವಿಷಯದ ಬಗ್ಗೆ ಕವನ ಬರೆಯುವಾಗ ಅದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಬರೆಯಬೇಕೆಂದು ಹೇಳಿದರು. 

ಅದ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎನ್.ಆರ್. ಕುಲಕಣರ್ಿ ಅವರು ಸಿರಿಗನ್ನಡ ವೇದಿಕೆ ನಡೆದುಬಂದ ದಾರಿ ಕುರಿತು ಮಾತನಾಡಿದರು. 

ಇದೇ ಸಂದರ್ಭದಲ್ಲಿ ಬೇಂದ್ರೆ ಕನ್ಮ ದಿನಾಚರಣೆಯ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿ ಹಾಗೂ ಬೇಂದ್ರೆ ಕಾವ್ಯಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಕವಿಗಳಾದ ರಂಗನಾಥ ಅಕ್ಕಲಕೋಟ, ಶ್ರೀಶೈಲ ಅವಟಿ, ಉಮೇಶ ಕಲಗೊಂಡ, ಶ್ರೀಮತಿ ಕೆ.ಸುನಂದಾ, ತುಳಸಿರಾಮ ಸೂರ್ಯವಂಶಿ, ರಮೇಶ ಕೋಟ್ಯಾಳ, ಬಸವರಾಜ ಕುಂಬಾರ, ಹಯಾತ ರೋಜಿನದಾರ, ಶ್ರೀರಂಗ ಪುರಾಣಿಕ, ಮಹೇಶ ಬಿ. ಸಜ್ಜನ, ಅ.ಬಾ. ಚಿಕ್ಕಮಣೂರ (ಅಕ್ಕಲಕೋಟ) ಭಾಗವಹಿಸಿದ್ದರು. 

ಡಾ|| ದ.ರಾ. ಬೇಂದ್ರ ಅವರ ಕುರಿತು ನಾಮೋಪಸನೆ ಸಂಗೀತ ಪಾಠಶಾಲೆ ಸಂದೇಶಪಾಂಡೆ ಕಾಲನಿ ವಿಜಯಪುರ ಅವರು ಕಾವ್ಯಗಾಯನ ಮಾಡಿದರು. 

ಶ್ರೀಮತಿ ಅನಿತಾ ಮನಗೂಳಿ ಪ್ರಾಥರ್ಿಸಿದರು. ಎಸ್.ಬಿ. ಬಾಗೇವಾಡಿ ಸ್ವಾಗತಿಸಿದರು. ಭರತೇಶ ಕಲಗೊಂಡ ನಿರೂಪಿಸಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಸುಶಿಲೇಂದ್ರ ನಾಯಕ, ಎ.ಎಸ್. ಜಾಲಗೇರಿ, ಪ್ರೊ. ಎ.ಎಸ್.ಕೋರಿ, ಶೇಷಗಿರಿರಾವ ಮಾನೆ, ಶ್ರೀಶೈಲ ಮದಭಾವಿ, ಪ್ರಮೋದ ಜೋಶಿ, ಆನಂದ ಗಾಯಿ, ಡಾ|| ಯಲಗೋಡ, ಎ.ಆರ್.ಕುಲಕಣರ್ಿ, ಜಿ.ಎಸ್.ಕುಲಕಣರ್ಿ, ಎಸ್.ಎಸ್. ಬಣಜಿಗೇರ, ಬಿ.ಎಸ್. ಸಜ್ಜನ, ಗಿರೀಜಾ ಮಾಲಿಪಾಟೀಲ, ವಿ.ಎಸ್. ಹಂದಿಗೋಳ, ಶಿವಾನಂದ ಅಂಬಿಗೇರ, ಸೋಮಶೇಖರ ಕುಲರ್ೆ ಮುಂತಾದವರಿದ್ದರು.