ಹಾವೇರಿ 29 :ಕಳೆದ ಎರಡು ದಶಕಗಳಿಂದ ಇಡೀ ವಿಶ್ವಕ್ಕೆ ಅನ್ನ ಕೊಡುವ ರೈತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ತಾಲೂಕಿನ ಕೋಣನತಂಬಗಿ ಗ್ರಾಮದ ನಿವಾಸಿ ಡಾ. ಗಂಗಯ್ಯ ಶಾಂತಯ್ಯ ಕುಲಕರ್ಣಿ ಅವರಿಗೆ ಆಂಧ್ರ ಪ್ರದೇಶದಲ್ಲಿ ಜರುಗಿದ ಹನ್ವಿಕಾ ಸಾವಯವ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯ ಪ್ರಶಸ್ತಿ ಸಮಾರಂಬ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ನಾಗೇಶ್ವರ ರಾವ್ ಅವರು ಕೃಷಿ ಕ್ಷೇತ್ರದಲ್ಲಿಯ ಅವರ ಅಬೂತಪೂರ್ವ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.
ಸನ್ಮಾನಿಸಿ ಮಾತನಾಡಿದ ಡಾ. ಬಿ. ನಾಗೇಶ್ವರರಾವ್ ಅವರು ಡಾ. ಗಂಗಯ್ಯ ಕುಲಕರ್ಣಿ ಅವರು ಈ ನಾಡಿನ, ನೆಲ, ಜಲ, ಪರಿಸರ ಸಂರಕ್ಷಣೆ ಹಾಗೂ ಕೃಷಿ ಕ್ಷೇತ್ರ ಅದರಲ್ಲೂ ವಿಶೇಷವಾಗಿ ಸಾವಯವ ಕೃಷಿಗೆ ಪ್ರಾದಾನ್ಯತೆ ಕೊಡುವುದರ ಮೂಲಕ ರೈತ ಸಮುದಾಯವನ್ನು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಪ್ರಾಯೋಗಿಕವಾಗಿ ಪರಿವರ್ತನೆ ಮಾಡುವ ವಿಶೇಷ ಸೇವೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತೆಲಂಗಾಣ, ಅಂದ್ರ್ರದೇಶ, ಮಹಾರಾಷ್ಟ್ರ, ಮದ್ಯಪ್ರದೇಶ,ತಮಿಳನಾಡು,ಕೇರಳ, ಇತ್ಯಾದಿ ರಾಜ್ಯಗಳಿಂದ ಆಗಮಿಸಿದ್ದ ನೂರಾರು ಕೃಷಿಕರು ಡಾ.ಗಂಗಯ್ಯ ಕುಲಕರ್ಣಿಗೆ ಶುಭ ಹಾರೈಸಿದರು.ಬಳ್ಳಾರಿಯ ಕೃಷಿ ಸಲಹೆಗಾರರಾದ ಟಿ ರವಿಶಂಕರ ಅವರು ಉಪಸ್ಥಿತರಿದ್ದರು.