19 ರಂದು ಹನುಮಮಾಲಾ, ಪಂಚಸೂಕ್ತ ಪವಮಾನ ಹೋಮ ಕಾರ್ಯಕ್ರಮ

ಚಿಕ್ಕೋಡಿ 03: ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ಸುಕ್ಷೇತ್ರ ಜಾಗೃತ ಹನುಮಾನ ದೇವಸ್ಥಾನ ತೋರಣಹಳ್ಳಿಯಲ್ಲಿ ಬುಧವಾರ ದಿ, 19 ರಂದು ಹನುಮಮಾಲಾ ಮತ್ತು ಪಂಚಸೂಕ್ತ ಪವಮಾನ ಹೋಮ ಕಾರ್ಯಕ್ರಮ ನಡೆಯಲಿದ್ದು, ಅಂದು ಸುಮಾರು ಐದು ಸಾವಿರ ಯುವಕರು ಹನುಮಮಾಲಾವನ್ನು ಧರಿಸಲಿದ್ದಾರೆ ಎಂದು ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ಕೈವಲ್ಯಾನಂದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ತೋರಣಹಳ್ಳಿ ಹನುಮನ ದೇವಸ್ಥಾನದಲ್ಲಿ ಶನಿವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಹನುಮ ಉದ್ಬವಿಸಿದ ಸುಕ್ಷೇತ್ರ ತೋರಣಹಳ್ಳಿಯಿಂದ ಹನುಮ ಜನ್ಮಿಸಿದ ಹಂಪಿ ಹತ್ತಿರ ಅಂಜನಾಧ್ರಿ ನಾಡಿನವರಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಅಂದು ದಿ, 19 ರಂದು ತೋರಣಹಳ್ಳಿ ಹನುಮ ದೇವಸ್ಥಾನದಲ್ಲಿ 21 ಸ್ವಾಮೀಜಿಗಳ ನೇತೃತ್ವದಲ್ಲಿ ಹೋಮ, ಪಂಚಸೂಕ್ತ ಯಾಗ, ಧರ್ಮ ಸಂಸ್ಕಾರ, ಧರ್ಮ ರಕ್ಷಣೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸುಮಾರು 10 ಸಾವಿರ ಜನ ಸೇರುವ ಈ ಕಾರ್ಯಕ್ರಮದ ಯಶಸ್ವಿಗೆ ತೋರಣಹಳ್ಳಿ, ಜೈನಾಪೂರ, ಚಿಕ್ಕೋಡಿ ಮುಂತಾದ ಪಟ್ಟಣಗಳ ಜನರು ಸಹಕಾರ ಮಾಡುತ್ತಿದ್ದು, ಗ್ರಾಮದಲ್ಲಿ ಸ್ವಚ್ಚತೆ, ಊಟದ ವ್ಯವಸ್ಥೆ, ವೇದಿಕೆ ಹೀಗೆ ಹತ್ತು ಹಲವಾರು ಕಾರ್ಯಕ್ರಮ ತಯಾರಾಗುತ್ತಿದೆ ಎಂದರು.

ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ವಿಶ್ವ ಹಿಂದು ಪರಿಷತ್ ದಕ್ಷಣ ಮಧ್ಯಕ್ಷೇತ್ರ ಸಂಘಟನಾ ಮಂತ್ರಿ ಕೇಶವ ಜಿ, ವಿಶೇಷ ಆಹ್ವಾನಿತರಾಗಿ ಆರ್ಎಸ್ಎಸ್ ಉತ್ತರ ಪ್ರಾಂತ ಸಹ ಸಂಘ ಪಾಲಕರು ಅರವಿಂದ ಶೃಶಪಾಂಡೆ, ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂತರ್ಿ ಅರವಿಂದ ಪಾಶ್ಚಾಪೂರೆ, ರಮೇಶ ಕುಡತರಕರ, ಡಾ,ಎಂ.ಬಿ.ಕುಂಬಾರ ಆಗಮೀಸಲಿದ್ದಾರೆ.ಅಧ್ಯಕ್ಷತೆಯನ್ನು ವುಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಆರ್.ಕೆ.ಬಾಗಿ ವಹಿಸಲಿದ್ದಾರೆ ಎಂದರು.

 ನ್ಯಾಯವಾದಿ ಧನ್ಯಕುಮಾರ ಗುಂಡೆ, ವಿಜಯಭಾಸ್ಕರ ಇಟಗೋನಿ, ರಾಮಗೌಡ ಲಚ್ಚಾಪ್ಪಗೋಳ, ಬಸವರಾಜ ಮಾಳಗೆ, ಸುಧಾಕರ ಖಾಡ್, ಸಿದ್ದಗೌಡ ಪಾಟೀಲ, ಮಹೇಶ ಬಾಕಳೆ, ಭೀಮರಾವ ಲಚ್ಚಾಪ್ಪಗೋಳ, ಸೂರಜ ಪೀರಪ್ಪಗೋಳ, ಮಹಾಲಿಂಗ್ ಹಂಜಿ, ಅಶೋಕ ಸಿಂಗಾಯಿ, ಜ್ಞಾನೇಶ್ವರ ಕಾಡೆ ಮುಂತಾದವರು ಇದ್ದರು.