ನವದೆಹಲಿ, ಏ 08 ,ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಹನುಮ ಜಯಂತಿಯ ಸಂದರ್ಭದಲ್ಲಿ ಶುಭ ಕೋರಿದ್ದಾರೆ. “ದೇಶವಾಸಿಗಳಿಗೆ ಹನುಮ ಜಯಂತಿಯ ಶುಭಾಶಯಗಳು. ಪವನಪುತ್ರನ ಜೀವನ ಎಲ್ಲರಿಗೂ ಆದರ್ಶ. ಭಕ್ತಿ ಹಾಗೂ ಶಿಸ್ತನ್ನು ತನ್ನುಸಿರಿನಲ್ಲಿ ಅಳವಡಿಸಿಕೊಂಡಿದ್ದ ಧೀಮಂತ. ಬದುಕಿನಲ್ಲಿ ಎದುರಾಗುವ ಎಲ್ಲ ಸವಾಲುಗಳಿಂದ ಹೊರಬರಲು ಸ್ಫೂರ್ತಿ ನೀಡುತ್ತದೆ” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ರಾವಣನಂತಹ ರಕ್ಕಸರನ್ನು ಸಂಹರಿಸುವ ಶ್ರೀರಾಮನ ಕಾರ್ಯದಲ್ಲಿ ಕೈಜೋಡಿಸಿದ ಕೀರ್ತಿ ಹಾಗೂ ರಾವಣನ ಪುತ್ರ ಅಕ್ಷಕುಮಾರ ಸೇರಿದಂತೆ ಹಲವರು ರಕ್ಕಸರನ್ನು ಯಮಪುರಿಗೆ ಅಟ್ಟಿದ ಕೀರ್ತಿಹನುಮಂತನಿಗೆ ಸಲ್ಲುತ್ತದೆ.ಶ್ರೀರಾಮ, ರಾವಣರ ಯುದ್ಧದ ವೇಳೆ ಮೂರ್ಛಿತನಾಗಿದ್ದ ಲಕ್ಷ್ಮಣನನ್ನು ಉಪಚರಿಸಲು ಸಂಜೀವಿನಿ ಪರ್ವತವನ್ನೇ ಹೊತ್ತುತಂದಿದ್ದ ಹನುಮಂತನ ಗಾಥೆ ಜನಜನಿತ. ಭಾರತದಲ್ಲಿ ಹನುಮನ ದೇವಾಲಯಗಳಿಲ್ಲದ ಊರೇ ಇಲ್ಲ ಎನ್ನಬಹುದು.