ಏಳನೇ ಆರ್ಥಿಕ ಗಣತಿ ಕಾರ್ಯ ಜವಾಬ್ದಾರಿಯುತವಾಗಿ ನಿರ್ವಹಿಸಿ: ಜಿಲ್ಲಾಧಿಕಾರಿ ಹಿರೇಮಠ


ಗದಗ 27: ಕಾರ್ಯದಲ್ಲ ಕೃಷಿಯೇತರ ಉದ್ದಿಮೆಗಳ ಮಾಹಿತಿ ಹಾಗೂ ಅವುಗಳ ಆರ್ಥಿಕ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸವುದು ಏಳನೆ ಆರ್ಥಿಕ ಗಣತಿ ಮುಖ್ಯ ಉದ್ದೇಶವಾಗಿದ್ದು ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚಿಸಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣತಿದಾರರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಆಯಾ ಪ್ರದೇಶದ ಸ್ಥಳೀಯರನ್ನೇ ಗಣತಿದಾರರನ್ನಾಗಿ ನಿಯೋಜಿಸಬೇಕು. ಆಥರ್ಿಕ ಗಣತಿಯ ಜನ ಜಾಗೃತಿಗಾಗಿ ನಗರ ಪ್ರದೇಶಗಳಲ್ಲಿ ಧ್ವನಿ ವರ್ಧಕದ ಮೂಲಕ  ಹಾಗೂ ಗ್ರಾಮೀಣ ವಲಯದಲ್ಲಿ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಗಣತಿದಾರರಿಗೆ ಅಗತ್ಯದ ಸಹಕಾರ ನೀಡಬೇಕು ಎಂದ ಜಿಲ್ಲಾಧಿಕಾರಿಗಳು ಆರ್ಥಿಕ ಚಟುವಟಿಕೆಗಳ ವಿವರಗಳನ್ನು ಗಣತಿದಾರರಿಗೆ ಒದಗಿಸಲು ಜಾಗೃತಿ ಮೂಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ವಹಿಸಲು ಸೂಚಿಸಿದರು. ಜಿಲ್ಲೆಯಲ್ಲಿ ನೋಂದಣಿಯಾಗಿರುವ ಕಾಖರ್ಾನೆ, ಬಾಯ್ಲರ, ಉದ್ಯಮ ಘಟಕಗಳ ತಾಲೂಕುವಾರು ಪಟ್ಟಿಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಪಡೆದು ನಗರ, ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರಿ ಸಂಘ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗಳ ಮೂಲಕ ಸಭೆ ಜರುಗಿಸಿ ಆಥರ್ಿಕ ಗಣತಿ ಕುರಿತ ಜಾಗೃತಿ ಮೂಡಿಸಬೇಕು. ಅಲ್ಲದೇ ಆದಷ್ಟು ಶೀಘ್ರವೇ ಗಣತಿ ಕಾರ್ಯ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ ಮಾತನಾಡಿ ಆರ್ಥಿಕ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 910 ಗಣತಿದಾರರನ್ನು 150 ಮೇಲ್ವಿಚಾರಕರನ್ನು ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ಎಸ್.ಎನ್. ಡಿ.ವೈ.ಎಸ್ಪಿ ವಾಯ್.ಎಸ್. ಈಗನಗೌಡ್ರ,  ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ತಹಶೀಲ್ದಾರರು, ಸ್ಥಳೀಯ ಸಂಸ್ಥೆ, ತಾಲೂಕು ಪಂಚಾಯತ  ಮುಖ್ಯಾಧಿಕಾರಿಗಳು, ಜಿಲ್ಲೆಯ ಎಲ್ಲ ತಹಶೀಲ್ದಾರರು,ವಿವಿಧ ಇಲಾಖೆಯ ಅಧಿಕಾರಿಗಳು, ಗಣತಿದಾರರು, ಗದಗ ಸಿ.ಎಸ್.ಸಿ ಮೇಲ್ವಿಚಾರಕ ನಾಸಿರಹ್ಮದ ಪಾಪನ್ನವರ, ಜಿಲ್ಲಾ ಸಂಯೋಜಕ ಬಸವರಾಜ ಸೊರಟೂರ, ಶಿವಶೇಖರಗೌಡರ ಪಾಟೀಲ, 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 7ನೇ ಆಥರ್ಿಕ ಗಣತಿಯ ಮೊಬೈಲ್ ಆಪ್ ಬಿಡುಗಡೆ ಮಾಡಲಾಯಿತು.