ಬ್ಯಾಡಗಿ 04: ಅಂಗವಿಕಲ ಮಕ್ಕಳು ಯಾರಿಗೂ ಕಡಿಮೆ ಇಲ್ಲ. ಕೀಳರಿಮೆ ಬಿಟ್ಟು, ಸಾಧನೆ ಮಾಡಬೇಕು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ಹೇಳಿದರು ಪಟ್ಟಣದ ಎನ್ ಬಿ ಬಿ ಲಯನ್ಸ್ ಶಾಲೆಯಲ್ಲಿ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ.ಕ್ಷೇತ್ರ ಸಂಪನ್ಮೂಲ ಕೆಂದ್ರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದವರುವಿಶಿಷ್ಟ ಚೇತನ ಮಕ್ಕಳು ನೀವು ದೇವರ ಮಕ್ಕಳು. ಬೇರೆಯವರಿಗಿಂತಲೂ ಶಕ್ತಿಶಾಲಿಗಳು.ಯಾವ ತಂದೆ ತಾಯಿ ಕೂಡ ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ’ ಎಂದರು.
ಸರ್ಕಾರ ವಿಶಿಷ್ಟ ಮಕ್ಕಳಿಗೆ ಈಗಾಗಲೇ ಬಹಳಷ್ಟು ಖರ್ಚು ಮಾಡುತ್ತಿದ್ದು ವಿಶಿಷ್ಟ ಮಕ್ಕಳ ಗೆ ಮನೆಗಳಿಗೆ ಹೋಗಿ ಫಿಸಿಯೋಥೆರಪಿ ಮಾಡುವ ಕೆಲಸವನ್ನು ಸಹ ಮಾಡುತ್ತಿದೆ ಮತ್ತು ಒಬ್ಬ ವೈದ್ಯರನ್ನು ಸಹ ನೆಮಿಸಲಾಗಿದೆ ಮತ್ತು ಪ್ರತಿ ತಿಂಗಳು 3000 ಗಳನ್ನು ನೀಡುತ್ತಿದ್ದು ಒಟ್ಟು ಒಂದು ತಿಂಗಳಲ್ಲಿ 13 ಲಕ್ಷ ರೂಪಾಯಿಗಳು ಸರ್ಕಾರ ನೀಡುತ್ತಿದೆ ಎಂದು ಹೇಳಿದರು ಹಾಗಾಗಿ ಯಾವ ತಂದೆ ತಾಯಿಯು ವಿಶಿಷ್ಟ ಮಕ್ಕಳನ್ನು ಧೃತಿಗೆಡದೆ ಅವರನ್ನು ಸಹ ಸಮಾಜದ ಮುಖ್ಯವಾಹಿನಿಯಲ್ಲು ತರಲು ಶ್ರಮಿಸಿ ಎಂದು ಸೂಚಿಸಿದರು
ಇದೇ ವೇಳೆ ಅಕ್ಷರ ದಾಸೋಹ ಅಧಿಕಾರಿ ಎಮ್ ಎಫ್ ಹುಲ್ಯಾಳ ಮಾತನಾಡಿ‘ಕೆಳಗೆ ಬೀಳುವ ವ್ಯಕ್ತಿಗಳ ಮೇಲಕ್ಕೆತ್ತುವುದೇ ಮಾನವ ಧರ್ಮ. ಪರಸ್ಪರ ಸಹಾಯದಿಂದ ಬದುಕು ನಡೆಸಬೇಕು’.‘ಸವಾಲು ಎದುರಿಸುವ ವಿಶೇಷ ಶಕ್ತಿ ಹಾಗೂ ಸ್ಥೈರ್ಯವನ್ನು ಅಂಗವಿಕಲರಿಗೆ ದೇವರು ನೀಡಿದ್ದಾನೆ. ಆತ್ಮವಿಶ್ವಾಸದಿಂದ ಇರಬೇಕು. ಛಲ ಮತ್ತು ನಂಬಿಕೆ ಇರಬೇಕು’ ಎಂದು ಹೇಳಿದರು.ವೃತಿಕಾ ಗುತ್ತಲ ಎಂಬ ವಿಶಿಷ್ಟ ಚೇತನ ಮಗು ನೃತ್ಯ ಪ್ರದರ್ಶನ ಮಾಡಿತು.ಸುಭಾಷ್ ಪ್ರಾಸ್ತಾವಿಕ ನುಡಿ ಮಾಡಿದರು.ಈ ಸಂದರ್ಭದಲ್ಲಿ ಮಂಜುನಾಥ ಉಪ್ಪಾರ.ಮಾಲತೇಶ ಅರಳಿಮಟ್ಟಿ.ವಿಶ್ವನಾಥ ಅಂಕಲಕೋಟಿ.ಎಸ್ ಎಮ್ ಬೂದಿಹಾಳ ಮಠ.ಇನ್ನರವ್ಹಿಲ ಸಂಸ್ಥೆಯ ಕವಿತಾ ಸೊಪ್ಪಿಮಠ.ಎಮ್ ಎಫ್ ಕರಿಯಣ್ಣವರಿ್ಶಲ್ಪಾ ಗುತ್ತಲ.ಸಂಪನ್ಮೂಲ ತಿಮ್ಮಣನವರ.ಆಶಾ ಕಾಟೇನಹಳ್ಳಿ.ಪುಷ್ಟಾ ಹಿರೆಮಠ.ಸುಮಾ ಹೊಸಮನಿ.ವಿಜಯಾ ಪಾಟೀಲ.ಕಿರಣ ಮಾಳೇನಹಳ್ಳಿ.ಪುನೀತ.ಸಂಧ್ಯಾ ದೆಶಪಾಂಡೆ..ಪ್ತೀಪ್ರತಿಭಾ ಪಾಟೀಲ್..ಉಪಸ್ಥಿತರಿದ್ದರು.