ಹ್ಯಾಂಡಬಾಲ್: ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆ

ಹಾರೂಗೇರಿ,03: ಗ್ರಾಮೀಣ ಭಾಗದಿಂದ ಬಂದ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ರಾಜ್ಯ, ಜಿಲ್ಲೆಗೆ ಹಾಗೂ ಸಂಸ್ಥೆಯ ಹೆಸರನ್ನು ತರುತ್ತಿದ್ದಾರೆ. ಹ್ಯಾಂಡಬಾಲ್ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಉತ್ತಮವಾದ ತರಬೇತಿಯನ್ನು ನೀಡಿ ಭಾರತ ದೇಶಕ್ಕೆ ಚಿನ್ನ ಪಡೆದುಕೊಂಡು ಬರಬೇಕೆಂದು ಬೆಳಗಾವಿ ಜಿಲ್ಲಾ ಹ್ಯಾಂಡಬಾಲ್ ಅಸೋಸಿಯೇಷನ ಅಧ್ಯಕ್ಷ ಡಾ. ಎಲ್.ಎಸ್.ಜಂಬಗಿ ಹೇಳಿದರು.

ಅವರ ಇತ್ತೀಚಿಗೆ ದಾವಣಗೇರಿ ಜಿಲ್ಲೆಯಲ್ಲಿ ನಡೆದ 15 ಹಾಗೂ 19 ವರ್ಷದ ಬಾಲಕಿ ಹಾಗೂ ಬಾಲಕರ ಹ್ಯಾಂಡಬಾಲ್ ಪಂದ್ಯಾವಳಿಯಲ್ಲಿ ಉತ್ತಮವಾಗಿ ತಮ್ಮ ಕ್ರೀಡೆಯನ್ನು ಪ್ರದರ್ಶನ ನೀಡಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಸನ್ಮಾನಿಸಿದರು.

15 ವರ್ಷದ ಒಳಗಿನ ಬಾಲಕಿಯರ ಹ್ಯಾಂಡಬಾಲ್ ಚಾಂಪಿಯನಶಿಫ್ದಲ್ಲಿ ಭಾಗವಹಿಸಿ ಬೆಳಗಾವಿ ಬಾಲಕಿಯರ ವಿಭಾಗದಲ್ಲಿ ಹ್ಯಾಂಡಬಾಲ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಾಗೂ ಬಾಲಕರ ಹ್ಯಾಂಡಬಾಲ್ ವಿಭಾಗದಲ್ಲಿ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ. ಈ ತಂಡ ತರಬೇತಿದಾರರಾಗಿ ಸುರೇಶ ಚನ್ನಾಳ ಹಾಗೂ ರಾಜು ತೇಲಿ ಕಾರ್ಯ ನಿರ್ವಹಿಸಿದರು.

19 ವರ್ಷದ ಒಳಗಿನ ಬಾಲಕಿಯರ ಕನರ್ಾಟಕ ರಾಜ್ಯ ತಂಡಕ್ಕೆ 5 ಜನ ಕ್ರೀಡಾಪಟುಗಳಾದ ಮೇಘಾ ಚಮಕೇರಿ, ಐಶ್ವರ್ಯ ಕಾಗಲೆ, ಸಹನಾ ಜಂಬಗಿ, ಸೌಮ್ಯಾ ಪನಾಳಕರ, ವಿದ್ಯಾ ಚಮಕೇರಿ ಇವರುಗಳು ಆಯ್ಕೆಯಾಗಿ ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಹ್ಯಾಂಡಬಾಲ್ ಚಾಂಪಿಯನಶಿಪದಲ್ಲಿ ಭಾಗವಹಿಸಿದರು. ಇದರಲ್ಲಿ ಮೇಘಾ ಚಮಕೇರಿ ಕನರ್ಾಟಕ ಹ್ಯಾಂಡಬಾಲ್ ತಂಡದ ನಾಯಕಿಯಾಗಿದ್ದರು. ತಂಡದ ತರಬೇತಿದಾರರಾಗಿ ಬೆಳಗಾವಿ ಜಿಲ್ಲಾ ಹ್ಯಾಂಡಬಾಲ್ ಅಸೋಸಿಯೇಷನ್ ಕಾರ್ಯದಶರ್ಿ ಪ್ರಕಾಶ ನರಗಟ್ಟಿ ತಂಡಕ್ಕೆ ಉತ್ತಮ ತರಬೇತಿಯನ್ನು ನೀಡಿದ್ದರು.

ಬೆಳಗಾವಿ ಜಿಲ್ಲಾ ಹ್ಯಾಂಡಬಾಲ್ ಅಸೋಸಿಯೇಷನ್ ಕೋಶಾಧಿಕಾರಿ ಮಲ್ಲಿಕಾಜರ್ುನ ಬುಲಬಿಲೆ, ಅಸೋಸಿಯೇಷನ್ ಸದಸ್ಯರಾದ ರಾಜು ನಾಗನೂರ, ಬಸು ಕುರಾಡೆ, ರಾಜು ತೇಲಿ ಹಾಗೂ ಹ್ಯಾಂಡಬಾಲ್ ಬಾಲಕ ಹಾಗೂ ಬಾಲಕಿಯರು ಉಪಸ್ಥಿತರಿದ್ದರು.