ಜಮಖಂಡಿ 24: ತಾಲ್ಲೂಕಿನ ಹುನ್ನೂರು ಗ್ರಾಮದ ಹಿರಿಯ ಸಂಗೀತ ಕಲಾವಿದ ಹನಮಂತಪ್ಪ ಶೇಷಪ್ಪ ಜಾಧವ(95) ಇತ್ತೀಚೆಗೆ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಪೇಟೆ ಮಾಸ್ತರ್(ಹಾರ್ಮೋನಿಯಂ) ಎಂದೇ ಖ್ಯಾತರಾಗಿದ್ದ ಹನಮಂತಪ್ಪ ಹವ್ಯಾಸಿ ಸಂಘಗಳು ಪ್ರದರ್ಶಿಸುತ್ತಿದ್ದ ನಾಟಕಗಳಲ್ಲಿ ಮೂಡಿಬರುವ ದೃಶ್ಯಗಳಿಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದರು. ಹಾರ್ಮೋನಿಯಂ ವಾದ್ಯದ ಮೂಲಕ ನಾಟಕಗಳ ಹಾಡುಗಳನ್ನು ಸಂಯೋಜಿಸಿ ಅಪಾರ ಪ್ರೇಕ್ಷಕರ ಮನಗೆದ್ದಿದ್ದರು. ಹುನ್ನೂರು ಗ್ರಾಮದ ಚನ್ನಬಸವೇಶ್ವರ ನಾಟ್ಯ ಸಂಘ, ಬಸವೇಶ್ವರ ನಾಟ್ಯ ಸಂಘ, ಶಾಕಾಂಬರಿ ನಾಟ್ಯ ಸಂಘ ಸೇರಿ ಸುತ್ತಮುತ್ತಲಿನ ಕಲ್ಹಳ್ಳಿ, ಮದರಖಂಡಿ, ಆಲಗೂರ ಗ್ರಾಮಗಳ ಹವ್ಯಾಸಿ ನಾಟಕ ಸಂಘಗಳು ಪ್ರದರ್ಶಿಸುತ್ತಿದ್ದ ನಾಟಕಗಳಿಗೆ 7 ದಶಕಗಳವರೆಗೆ ಸಂಗೀತ ಸೇವೆಸಲ್ಲಿಸಿದ್ದರು.